ಗದಗ: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಗದಗ ಜಿಲ್ಲೆ ಹಾಗೂ ಕೆ ಈ ಕಾಂತೇಶ ಗುರುಸ್ವಾಮಿಗಳ ಸಹಯೋಗದಲ್ಲಿ ಗದಗ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಡಿ. 20 ರಂದು ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜಾ ಹಾಗೂ ಮಹಾಪ್ರಸಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಗದಗ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನ ನಡೆಸಿ ಮಾತನಾಡಿದ,
ಆನಂದ ಗುರುಸ್ವಾಮಿ ಅವರು ಕೇರಳದ ಅಯ್ಯಪ್ಪ ಸ್ವಾಮಿ ದೇವಾಲಯದ ತಂತ್ರಿಗಳಾದ ಶಿವಶಂಕರನ್ ನಂಬೂದಿರಿಪ್ಪಾಡ್ ರವರಿಂದ ಮಹಾಪೂಜೆ ನಡೆಯಲಿದ್ದು ಸುಮಾರು 1500 ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಲಿದ್ದಾರೆ ಅಂದ್ರು. ಸುದ್ದಿಗೋಷ್ಠಿಯಲ್ಲಿ ಗದಗ-ಬೆಟಗೇರಿ ನಗರಸಭೆ ಸದಸ್ಯ ಅನಿಲ್ ಅಬ್ಬಿಗೇರಿ, ಮುಖಂಡ ರಮೇಶ ಸಜ್ಜಗಾರ,
ಮಂಜುನಾಥ ಹಳ್ಳೂರಮಠ ಗುರುಸ್ವಾಮಿ, ಸದಾನಂದ, ನಾಗರಾಜ ಬಾಗಲಕೋಟೆ, ಪ್ರಸಾದ್ ಕೋಡಿತ್ಕರ್, ಜಗದೀಶ ಸಂಕನಗೌಡ್ರ, ರಂಗಪ್ಪ ಬಂಡಿವಡ್ಡರ, ಮುತ್ತಣ್ಣ ಬೂದಿಹಾಳ, ಶಿದ್ಲಿಂಗಪ್ಪ ಉಮಚಗಿ, ಗುರುನಾಥ ಗುರುಸ್ವಾಮಿ, ವೆಂಕಟೇಶ ದ್ವಾಸಲಕೇರಿ ಸೇರಿದಂತೆ ಇತರ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.