ಬೆಂಗಳೂರು :- ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್ ಆಗೋದೇ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷ್ಯದಿಂದ ಅಂತ ಜನ ದೂರುತ್ತಾರೆ. ಅದರಂತೆ ನಗರದಲ್ಲಿ ಯಾರ್ರಾಬಿರ್ರಿ ಆಕ್ಸಿಡೆಂಡ್ ರೇಟ್ ಹೆಚ್ಚಳವಾಗ್ತಿದೆ. ಇದ್ರಿಂದ ತಲೆಕೆಡಿಸಿಕೊಂಡಿರೋ ಬಿಎಂಟಿಸಿ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಮೊರೆ ಹೋಗಿದೆ
ಹೆಸರಿಗೆ ಕಳಂಕ ತಂದುಕೊಂಡಿದ್ದ ಬಿಎಂಟಿಸಿ ಈ ಅಪವಾದದಿಂದ ಮುಕ್ತವಾಗುವುದಕ್ಕೆ ಹೆಜ್ಜೆ ಇರಿಸಿದೆ. ಪ್ರತಿ ತಿಂಗಳೂ ನಗರದಲ್ಲಿ ಬಿಎಂಟಿಸಿ ಅಪಘಾತಗಳು ಆಗ್ತಾನೆ ಇವೆ. ಇದು ನಿಯಂತ್ರಣಕ್ಕೆ ಬರ್ತಿಲ್ಲ. 2013-14 ರಲ್ಲಿ 88 ಮಂದಿ ಮೃತಪಟ್ಟಿದ್ದರು. 2014-15ರಲ್ಲಿ 78, 2015-16ರಲ್ಲಿ 69, 2016-17ರಲ್ಲಿ 45, 2017 – 18 ರಲ್ಲಿ 44, 2022-23ರಲ್ಲಿ 35 ಮಂದಿ ಬಿಎಂಟಿಸಿ ಬಸ್ ನಿಂದ ಸಾವನ್ನಪ್ಪಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರೋ ಬಿಎಂಟಿಸಿ ಅಧಿಕಾರಿಗಳು ಎಲ್ಲಾ ಡ್ರೈವರ್ ಗಳಿಗೆ ನುರಿತ ತರಬೇತಿ ಕೊಡಿಸಲು ಮುಂದಾಗಿದ್ದಾರೆ. ನಗರದ ರಸ್ತೆಗಳಲ್ಲಿ ಹೇಗೆಲ್ಲಾ ಬಸ್ ಓಡಿಸಬೇಕು ಸಿಗ್ನಲ್ ಬಂದಾಗ ಹೇಗೆ ಬಸ್ ಓಡಿಸಬೇಕು ಅನ್ನೋ ಸಂಚಾರಿ ನಿಯಮಗಳ ಬಗ್ಗೆ ಸಂಚಾರಿ ಪೊಲೀಸರು ಡ್ರೈವರ್ ಗಳಿಗೆ ಪಾಠ ಮಾಡಲಿದ್ದಾರೆ. ನಗರದ ಕಮಾಂಡ್ ಸೆಂಟರ್ ನಲ್ಲಿ ನಿತ್ಯ 50 ಚಾಲಕರಿಗೆ ಪೊಲೀಸರು ತರಬೇತಿ ನೀಡಲಿದ್ದಾರೆ.
ನಗರದಲ್ಲಿ ಅಪಘಾತಗಳು ಚಾಲಕನ ಅಚಾತುರ್ಯ, ನೈಪುಣ್ಯದ ಕೊರತೆಯಿಂದ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಸಂಸ್ಥೆಯಲ್ಲಿ ಚಾಲಕರಿಗೆ ಸುರಕ್ಷಿತ ಚಾಲನೆಗೆ ಸಂಬಂಧಿಸಿದಂತೆ ತರಬೇತಿ ಸಹ ಕೊಡಿಸಲಾಗುತ್ತಿದೆ. ಇದಲ್ಲದೇ ಅಪಘಾತವೆಸಗಿದ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಚಿನ್ನ, ಬೆಳ್ಳಿ ಪದಕದ ಜೊತೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಆದರೆ ನಗರದಲ್ಲಿ ಅಪಘಾತಗಳು ನಡೆಯುತ್ತಿವೆ. ಬಿಎಂಟಿಸಿ ಡ್ರೈವರ್ ಗಳಿಗೆ ಟ್ರೈನಿಂಗ್ ನೀಡಲು ಮುಂದಾಗಿರುವುದು ಸಂತೋಷದ ವಿಚಾರ ಎಂದು ಬಿಎಂಟಿಸಿ ಪ್ರಯಾಣಿಕರು ಖುಷಿ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಾರಣಾಂತಿಕ ಅಪಘಾತಗಳ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಪಘಾತ ಪ್ರಕರಣಗಳಲ್ಲಿ ಭಾಗಿಯಾದ ಚಾಲಕರಿಗೆ ಸುರಕ್ಷಿತ ಚಾಲನೆ ಬಗ್ಗೆ ಸಲಹೆ, ಸೂಚನೆ ನೀಡುತ್ತಿದೆ. ಒಟ್ಟಿನಲ್ಲಿ ನಗರದಲ್ಲಿ ನಿತ್ಯ ಬಿಎಂಟಿಸಿ ಒಂದಲ್ಲ ಒಂದು ಸಾವು ಪಡೆಯುತ್ತನೇ ಇತ್ತು. ಇದರಿಂದ ಕಿಲ್ಲರ್ ಬಿಎಂಟಿಸಿ ಅಣೆಪಟ್ಟಿ ಪಡೆದುಕೊಂಡಿತ್ತು. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಸಿದ್ದು, ಆದರೆ ಇದೀಗ ಬಿಎಂಟಿಸಿ ಅಪಘಾತಗಳ ಸಂಖ್ಯೆ ಇಳಿಕೆ ಮಾಡೋಕೆ ಹೊಸ ಪ್ಲಾನ್ ರೂಪಿಸಲಾಗಿದೆ