ದಾವಣಗೆರೆ: ಸಾಕಿದ ನಾಯಿ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳರದ್ದು ಯಾವಾಗಲೂ ಅಶ್ಲೀಲ ಪದ ಬಳಸುವುದೇ ಚಾಳಿ. ಅಂತವರ ಬಗ್ಗೆ ಮಾತಾಡೋಕೆ ನನಗೆ ಅಸಹ್ಯ ಅನಿಸುತ್ತೆ, ನಾಚಿಕೆ ಆಗುತ್ತೆ ಎಂದು ತಿರುಗೇಟನ್ನ ನೀಡಿದ್ದಾರೆ.
ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಶಾಸಕ ಯತ್ನಾಳ್ ವಿರುದ್ದ ಹರಿಹಾಯ್ದರು. ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತವೆ. ಅವುಗಳು ಬೊಗಳಿದರೆ ಆನೆಯ ತೂಕವೇನು ಕಡಿಮೆಯಾಗಲ್ಲ. ಹೀಗೆ ಯತ್ನಾಳ್ ಕೂಡ ಮಾತಾನಾಡುತ್ತಾರೆ. ಅವರು ಮಾತಾಡುವುದರಿಂದ ಯಡಿಯೂರಪ್ಪನ ತೂಕವೇನು ಕಡಿಮೆಯಾಗಲ್ಲ. ನಾಯಿಗೆ ಇರುವ ನಿಯತ್ತು ಕೂಡ ಆ ಮನುಷ್ಯನಿಗೆ ಇಲ್ಲ.
MP Renukacharya: ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ಎಂಪಿ ರೇಣುಕಾಚಾರ್ಯ ವಾಗ್ದಾಳಿ
ನಿಮ್ಮನ್ನ ಬಿಜೆಪಿಗೆ ಕರೆ ತಂದದ್ದು ಯಡಿಯೂರಪ್ಪ, ಕೇಂದ್ರ ಮಂತ್ರಿ ಮಾಡಿದ್ದು ಯಡಿಯೂರಪ್ಪ. ಈತ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಬೆಳಕು ಚಲ್ಲಬೇಕಿತ್ತು. ಅದನ್ನು ಬಿಟ್ಟು ಕೇವಲ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಒಳಗು ಹೊರಗು ಅದನ್ನೇ ಮಾತಾಡಿದ್ದಾರೆ. ಈ ಮನುಷ್ಯನಿಗೆ ಮೆದುಳು ಮತ್ತು ನಾಲಿಗೆಗೂ ಲಿಂಕ್ ಇಲ್ಲ. ಆತನಿಗೆ ಗೌರವ ಕೊಡ್ತಿದ್ದೆ ಇನ್ಮುಂದೆ ಕೊಡಲ್ಲ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.