ಸೂರತ್: ನನ್ನ 3ನೇ ಅವಧಿಯಲ್ಲಿ ಭಾರತ ದೇಶವು ವಿಶ್ವದ ಟಾಪ್-3 ಆರ್ಥಿಕತೆಗಳಲ್ಲಿ (Economies) ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಮತ್ತೊಂದು ಗ್ಯಾರಂಟಿ ನೀಡಿದ್ದಾರೆ. ಗುಜರಾತ್ನ ವಾಣಿಜ್ಯನಗರಿ ಸೂರತ್ನಲ್ಲಿ ಡೈಮಂಡ್ ಬೋರ್ಸ್ (Surat Diamond Bourse) ಕಚೇರಿ ಸಂಕೀರ್ಣ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್-3 ಆರ್ಥಿಕತೆಗಳಲ್ಲಿ ಒಂದಾಗಲಿದೆ.
ಅದಕ್ಕಾಗಿ ಸರ್ಕಾರವು ಮುಂಬರುವ 25 ವರ್ಷಗಳ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ. ಸೂರತ್ ಡೈಮಂಡ್ ಬೋರ್ಸ್ ʻನವ ಭಾರತದ ಶಕ್ತಿʼಯ ಸಂಕೇತ. ಈ ಸಂಕೀರ್ಣವು ರಾಷ್ಟ್ರದ ಪ್ರಗತಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಜನರು ಈ ಡೈಮಂಡ್ ಬೋರ್ಸ್ ಬಗ್ಗೆ ಮಾತನಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
MP Renukacharya: ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ಎಂಪಿ ರೇಣುಕಾಚಾರ್ಯ ವಾಗ್ದಾಳಿ
ಬೋರ್ಸ್ ಭಾರತೀಯ ವಿನ್ಯಾಸ, ಭಾರತೀಯ ವಿನ್ಯಾಸಕಾರರು, ಭಾರತೀಯ ವಸ್ತು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯವನ್ನು ಇಲ್ಲಿ ಪ್ರದರ್ಶಿಸುತ್ತಿದೆ. ನಮ್ಮ ಈ ಕಚೇರಿ ಸಂಕೀರ್ಣದ ಎದುರು ಇತರ ಕಟ್ಟಡಗಳು ತಮ್ಮ ಹೊಳಪನ್ನೇ ಕಳೆದುಕೊಳ್ಳುತ್ತವೆ. ಈ ಹಿಂದೆ ಸೂರತ್ ನಗರವನ್ನು ʻಸೂರ್ಯನಗರʼಎಂದು ಕರೆಯಲಾಗುತ್ತಿತ್ತು. ಇಲ್ಲಿನ ಜನರ ಪರಿಶ್ರಮದಿಂದ ಈಗ ʻಡೈಮಂಡ್ ಸಿಟಿʼ ಆಗಿದೆ ಎಂದು ಶ್ಲಾಘಿಸಿದ್ದಾರೆ.