ನವದೆಹಲಿ: ಪ್ರತಾಪ್ ಸಿಂಹ (Pratap Simha) ಅವರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಂಬುದೆಲ್ಲವೂ ತನಿಖೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಾದನೀಯ, ಖಂಡನೀಯ. ಘಟನೆಯ ಬಳಿಕ ಲೋಕಸಭಾ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು.
ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷತೆ ಮಾಡುವುದು ನಮ್ಮ ಉದ್ದೇಶ. 1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
DK Shivkumar: ಪ್ರತಾಪ್ ಸಿಂಹರನ್ನು ಟ್ರ್ಯಾಪ್ ಮಾಡಲಾಗ್ತಿದೆ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?
ಆಯುಧ ಸೇರಿದಂತೆ ಇತ್ಯಾಧಿ ವಸ್ತು ಪಡೆದು ಗ್ಯಾಲರಿಗೆ ಬಂದಿರುವುದು ಇದೆ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ತೆಗೆದುಕೊಂಡ ಪರಂಪರೆಯನ್ನು ಪರಿಶೀಲಿಸಿ ಅಂತೆಯೇ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ ತನಿಖೆಗೆ ಸ್ಪೀಕರ್ ಆದೇಶಿಸಿದ್ದಾರೆ. ಸದನದ ಮುಖ್ಯಸ್ಥರು ಸ್ಪೀಕರ್ ಅವರ ನಿರ್ಣಯ ಅಂತಿಮ. ಭದ್ರತೆಯನ್ನು ಅವರೇ ಅಂತಿಮ ಮಾಡುತ್ತಾರೆ. ಸರ್ಕಾರದ ಪಾತ್ರ ಇಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.