ಹುಬ್ಬಳ್ಳಿ; ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಪಲ್ಲಕ್ಕಿ’ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಜನಪ್ರಿಯವಾಗುತ್ತಿದ್ದು . ಹಲವಾರು ಮಾರ್ಗದಲ್ಲಿ ಈಗಾಗಲೇ ಬಸ್ಗಳ ಸಂಚಾರ ಆರಂಭಿಸಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲು ‘ಪಲ್ಲಕ್ಕಿ’ ಬಸ್ ಸೇವೆ ಆರಂಭವಾಗಿದೆ. ನೈರುತ್ಯ ಸಾರಿಗೆ ತಾಳಿಕೋಟೆ, ಗಂಗಾವತಿಗೆ ವಯಾ ಹುಬ್ಬಳ್ಳಿ ‘ಪಲ್ಲಕ್ಕಿ’ ಬಸ್ ಸೇವೆಯನ್ನು ಆರಂಭಿಸಿದೆ. ಅಕ್ಟೋಬರ್ನಲ್ಲಿ ‘ಪಲ್ಲಕ್ಕಿ’ ಹೆಸರಿನ ನೂತನ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಆರಂಭಿಸಿದೆ. ರಾಜ್ಯದ ಹಲವಾರು ಮಾರ್ಗದಲ್ಲಿ ಈ ಬಸ್ಗಳು ಸಂಚಾರ ನಡೆಸುತ್ತಿವೆ.
ಸಾಗರ-ಶಿವಮೊಗ್ಗ-ವಿಜಯಪುರ ಸ್ಲೀಪರ್ ಪಲ್ಲಕ್ಕಿ ಬಸ್, ವೇಳಾಪಟ್ಟಿ
ಬಸ್ ವೇಳಾಪಟ್ಟಿ; ಮಂಗಳೂರು-ತಾಳಿಕೋಟೆ ನಡುವಿನ ‘ಪಲ್ಲಕ್ಕಿ’ ಬಸ್ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಡಲಿದೆ. ಮುಂಜಾನೆ 2.45ಕ್ಕೆ ಹುಬ್ಬಳ್ಳಿ, ಬಳಿಕ 7 ಗಂಟೆಗೆ ತಾಳಿಕೋಟೆ ತಲುಪಲಿದೆ. ತಾಳಿಕೋಟೆ-ಮಂಗಳೂರು ನಡುವಿನ ಬಸ್ ಸಂಜೆ 5.01ಕ್ಕೆ ತಾಳಿಕೋಟೆಯಿಂದ ಹೊರಡಲಿದೆ. 10.45ಕ್ಕೆ ಹುಬ್ಬಳ್ಳಿ ಮತ್ತು ಮರುದಿನ ಬೆಳಗ್ಗೆ 6.45ಕ್ಕೆ ಮಂಗಳೂರು ತಲುಪಲಿದೆ.
ಬಸ್ ವೇಳಾಪಟ್ಟಿ ದರ ಮಂಗಳೂರು-ಉಡುಪಿ-ಗಂಗಾವತಿ ಸ್ಲೀಪರ್ ಪಲ್ಲಕ್ಕಿ ಬಸ್ ವೇಳಾಪಟ್ಟಿ, ದರ ವಿವರ
ಮಂಗಳೂರು-ಗಂಗಾವತಿ ನಡುವಿನ ಬಸ್ ಮಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು, 3.45ಕ್ಕೆ ಹುಬ್ಬಳ್ಳಿ ತಲುಲಪಿದೆ. ಗಂಗಾವತಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಗಂಗಾವತಿ-ಮಂಗಳೂರು ನಡುವಿನ ಬಸ್ ಗಂಗಾವತಿಯಿಂದ ಸಂಜೆ 6.31ಕ್ಕೆ ಹೊರಡಲಿದೆ. ಹುಬ್ಬಳ್ಳಿಗೆ 10 ಗಂಟೆಗೆ ತಲುಪಲಿದೆ. ಮಂಗಳೂರಿಗೆ ಮರುದಿನ ಬೆಳಗ್ಗೆ 6.30ಕ್ಕೆ ತಲುಪಲಿದೆ.
ಕೆಎಸ್ಆರ್ಟಿಸಿ ಹುಬ್ಬಳ್ಳಿ-ಮಂಗಳೂರು ನಡುವಿನ ಪ್ರಯಾಣ ದರ 818 ರೂ. ಎಂದು ನಿಗದಿ ಮಾಡಿದೆ. ಮಂಗಳೂರು-ತಾಳಿಕೋಟೆ ನಡುವಿನ ದರ 1,315 ರೂ. ಮತ್ತು ಮಂಗಳೂರು ಮತ್ತು ಗಂಗಾವತಿ ನಡುವಿನ ದರ 1,131 ರೂ. ಆಗಿದೆ. ‘ಪಲ್ಲಕ್ಕಿ’ ಮಾದರಿ ಬಸ್ಗಳಲ್ಲಿ ಸಂಚಾರ ನಡೆಸಲು ಬಯಸುವ ಜನರು https://www.ksrtc.in/oprs-web/ ವೆಬ್ ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 080-26252625.
ಕೆಎಸ್ಆರ್ಟಿಸಿ ಈಗಾಗಲೇ ಸಾಗರ, ಸೊರಬ, ಶಿಕಾರಿಪುರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ. ಸಾಗರ-ಶಿವಮೊಗ್ಗ-ವಿಜಯಪುರ ಮಾರ್ಗ ವಯಾ ಹರಿಹರ, ಹೊಸಪೇಟೆ, ಇಳಕಲ್ ‘ಪಲ್ಲಕ್ಕಿ’ ಬಸ್ ಸೇವೆಗಳನ್ನು ಆರಂಭಿಸಿದೆ. ವಿವಿಧ ವಿಭಾಗಗಳಿಗೆ ಹೊಸ ಬಸ್ಗಳನ್ನು ಹಂಚಿಕೆ ಮಾಡುತ್ತಿದೆ. ಈ ಮಾದರಿಯ ಬಸ್ಗಳಿಗೆ ‘ಪಲ್ಲಕ್ಕಿ’ ಎಂಬ ಹೆಸರು ನೀಡಿದ್ದು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ. ‘ಸಂತೋಷವು ಪ್ರಯಾಣಿಸುತ್ತದೆ’ ಎಂಬ ಟ್ಯಾಗ್ ಲೈನ್ ಇದಕ್ಕೆ ನೀಡಲಾಗಿದೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಶೀಘ್ರದಲ್ಲಿಯೇ ‘ಪಲ್ಲಕ್ಕಿ’ ಮಾದರಿಯ 10 ಬಸ್ಗಳು ಸೇರಲಿವೆ.ಈ ಬಸ್ 11.3 ಮೀಟರ್ ಉದ್ದವಿದೆ. ಬಿಎಸ್-6 ತಂತ್ರಜ್ಞಾನ ಮಾದರಿ ಹೆಚ್ಪಿ ಇಂಜಿನ್ ಹೊಂದಿದೆ. 30 ಸೀಟುಗಳನ್ನು ಹೊಂದಿರುವ ಬಸ್ನ ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. ಆಡಿಯೋ ಸ್ಪೀಕರ್ ಮೂಲಕ ಜನರಿಗೆ ನಿಲ್ದಾಣದ ಮಾಹಿತಿ ನೀಡುವ ವ್ಯವಸ್ಥೆ ಇದೆ. ಈ ಬಸ್ಗಳಲ್ಲಿ ಚಾಲಕರಿಗೆ ಸಹಾಯಕವಾಗಲು ಹಿಂಭಾಗದಲ್ಲಿ ಸಹ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮಾದರಿ ಬಸ್ಗಳು ಸದ್ಯ ಕರ್ನಾಟಕದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಚಾರ ನಡೆಸುತ್ತಿವೆ.