ಈ ವಾರ ದೊಡ್ಮನೆಯ ಪಯಣ ಮುಗಿಸೋರು ಯಾರು ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅಚ್ಚರಿಯನ್ನುವಂತೆ ಪವಿ ಪೂವಪ್ಪ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಪವಿ (Pavi Poovappa) ಈ ವಾರ ಬಿಗ್ ಬಾಸ್ (Bigg Boss Kannada) ಪಯಣ ಮುಗಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದ ಪವಿ, ಇಷ್ಟು ಬೇಗ ಆಚೆ ಬರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ.
ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ಇಬ್ಬರೂ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಆನೆಯನ್ನು ಪಳಗಿಸಲು ಅವಿನಾಶ್ ಬಂದಿದ್ದಾರೆ ಎಂದೇ ಹೇಳಲಾಗಿತ್ತು. ಪವಿ ಪೂವಪ್ಪ ಮನೆಯ ಮಹಿಳಾ ಸದಸ್ಯರಿಗೆ ಮತ್ತಷ್ಟು ಉತ್ತೇಜ ನೀಡಲಿದ್ದಾರೆ ಎನ್ನುವ ನಂಬಿಕೆ ಇತ್ತು. ಇವೆರಡೂ ಸುಳ್ಳಾಗಿವೆ. ಅವಿನಾಶ್ ತಾವು ಬಿಗ್ ಬಾಸ್ ಮನೆಗೆ ಯಾಕೆ ಬಂದಿದ್ದು ಎನ್ನುವುದನ್ನೇ ಮರೆತಿದ್ದಾರೆ. ಅತೀ ವೀಕ್ ಕಂಟೆಸ್ಟೆಂಟ್ ಆಗಿ ಬದಲಾಗಿದ್ದಾರೆ. ಪವಿ ಕಡಿಮೆ ಸಮಯದಲ್ಲೇ ಮನೆಯಿಂದ ನಿರ್ಗಮಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯ ಇತರ ಮಹಿಳಾ ಸದಸ್ಯರಿಗೆ ಹೋಲಿಸಿದರೆ, ಪವಿ ವೀಕ್ ಕಂಟೆಸ್ಟೆಂಟ್ ಆಗಿದ್ದರು. ಈ ವಾರ ಚೆನ್ನಾಗಿ ಆಟ ಆಡಿದ್ದರೂ, ಹೇಳಿಕೊಳ್ಳುವಂತಹ ಗೆಲುವು ಅವರದ್ದಾಗಿರಲಿಲ್ಲ. ಸಿರಿ ಅವರಿಗಿಂತಲೂ ಪವಿ ಓಕೆ ಎಂದೇ ನಂಬಲಾಗಿತ್ತು. ಆದರೆ, ಸಿರಿಯನ್ನೂ ಸೋಲಿಸಲು ಅವರಿಂದ ಆಗಿಲ್ಲವೆಂದು ಹೇಳಲಾಗುತ್ತಿದೆ. ಜೊತೆಗೆ ಕಡಿಮೆ ವೋಟು ಬಂದ ಕಾರಣದಿಂದಾಗಿ ಪವಿ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.