ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹ್ರದಯ ಭಾಗದಲ್ಲಿರುವ ಜೋಡಿ ಕೆರೆ ಅಭಿವೃದ್ಧಿಗೆ 10 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರು ಮಾಡುವುದಾಗಿ ಪೌರಾಡಳಿತ ಸಚಿವ ರಹೀಮ್ ಖಾನ್ ಹೇಳಿದರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಅಥಣಿ ಮತಕ್ಷೇತ್ರದ ಜನರಿಗೆ ಒಬ್ಬ ಒಳ್ಳೆಯ ಶಾಸಕ ಸಿಕ್ಕಿದ್ದಾರೆ.
DK Shivkumar: ಪ್ರತಾಪ್ ಸಿಂಹರನ್ನು ಟ್ರ್ಯಾಪ್ ಮಾಡಲಾಗ್ತಿದೆ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?
ಲಕ್ಷ್ಮಣ ಸವದಿ ಅವರ ಆಹ್ವಾನದ ಮೆರೆಗೆಅಥಣಿ ಪುರಸಭೆಗೆ ಭೇಟಿ ನೀಡಿದ್ದು ಐತಿಹಾಸಿಕ ಜೋಡಿ ಕೆರೆಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಇದೆ ಸಂದರ್ಭದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ರಹೀಮ್ ಖಾನ್ ಅವರು ಒಬ್ಬ ಕ್ರಿಯಾಶೀಲ ಸಚಿವರು ಜೋಡಿ ಕೆರೆ ಅಭಿವೃದ್ಧಿಗೆ ಸ್ಥಳದಲ್ಲೇ ಅನುದಾನ ಬಿಡುಗಡೆ ಮಾಡಲು ಇಲಾಖೆಗೆ ಸೂಚನೆ ನೀಡಿದ್ದು ಸಂತಸದ ಸಂಗತಿ ಎಂದರು ಬಳಿಕ ಪುರಸಭೆಯ ಸರ್ವ ಸದಸ್ಯರು ಅಥಣಿ ಪುರಸಭೆಯನ್ನು ನಗರಸಭೆ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.