ಕಲಬುರಗಿ:- ಜಿಲ್ಲೆಯಲ್ಲಿ ಕಳವು ಪ್ರಕರಣ ಹೆಚ್ಚಾಗ್ತಿರೋ ಹಿನ್ನಲೆ ಜನರಲ್ಲಿ ಜಾಗೃತಿ ಮೂಡಿಸಲು ಪೋಲೀಸರು ಇದೀಗ ಡಂಗುರ ಮೊರೆ ಹೋಗಿದ್ದಾರೆ.
ಹೌದು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಅಫಜಲಪುರ ಪೋಲೀಸರು ಹಳ್ಳಿ ಹಳ್ಳಿಯಲ್ಲಿ ಡಂಗುರ ಸಾರಿ ತಿಳುವಳಿಕೆ ನೀಡ್ತಿದ್ದಾರೆ..
ಹೊಲದಲ್ಲಿನ ಬೆಳೆಕಡೆ ಗಮನ ಕೊಡಿ ಅಷ್ಟೇಅಲ್ಲ ಮನೆಯಲ್ಲಿನ ನಗನಾಣ್ಯ ಬ್ಯಾಂಕಲ್ಲಿಡಿ ಅತ ಬಡದಾಳ ಗ್ರಾಮದಲ್ಲಿ ಹಲಿಗೆ ಬಾರಿಸಿ ಡಂಗುರ ಹೊಡೆದಿದ್ದಾರೆ…