ಕಂಪ್ಲಿ:- ಸುಮಾರು 7 ವರ್ಷದ ಮೊಸಳೆಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ಕೋಟೆಯ ತುಂಗಾಭದ್ರ ನದಿ ತಟದ ಜಾಕ್ವೆಲ್ ಬಳಿ ಜರುಗಿದೆ
ಪುರಸಭೆ ಸಿಬ್ಬಂದಿಯವರು ಕೆಲಸಕ್ಕೆಂದು ತೆರಳಿದ್ದಾಗ ಮೃತ ಮೊಸಳೆಯನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿ, ನಂತರ ಮೃತ ಮೊಸಳೆಯನ್ನು ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ಈ ವೇಳೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲಾಗದೆ ಮೊಸಳೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.