ಜೋಹಾನ್ಸ್ ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ (ಇಂದು) ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊಸ ತಲೆಮಾರಿನ ತಾರೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಲುಗಟ್ಟಿ ನಿಂತಿದ್ದು ಭಾರತದ ಏಕದಿನ ಭವಿಷ್ಯದ ಪ್ರಯಾಣಕ್ಕೆ ಇದು ಮೊದಲ ಹೆಜ್ಜೆಯಾಗುವ ನಿರೀಕ್ಷೆ ಇದೆ.
ಅಷ್ಟೇ ಅಲ್ಲದೇ ಉಭಯ ತಂಡಗಳಿಗೆ ಈ ಮುಖಾಮುಖಿಯು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮುಂಚಿತವಾಗಿ ಹೊಸ ಸ್ಟಾರ್ಗಳ ಆಗಮನವನ್ನು ಬಿಂಬಿಸುತ್ತದೆ. ಕಳೆದ ಒಂದೂವರೆ ದಶಕದಿಂದಲೂ ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Virat Kohli and Rohit Sharma) ಉತ್ತುಂಗದಲ್ಲಿದ್ದಾರೆ. ಆದರೀಗ ಅವರು ತಮ್ಮ ವೃತ್ತಿಜೀವನದ ಮುಸ್ಸಂಜೆಗೆ ಸರಿಯುತ್ತಿದ್ದಾರೆ. ಹೀಗಾಗಿ ಯುವ ಭಾರತೀಯರ ಹೆಸರು ತಮ್ಮ ಪರಂಪರೆ ಮುಂದುವರಿಸಬೇಕಾಗಿದೆ.
ಮೂರು ಏಕದಿನ ಪಂದ್ಯಗಳ ಸರಣಿಯ ನಾಯಕತ್ವ ವಹಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಪಂದ್ಯದ ಕೇಂದ್ರ ಬಿಂದುವಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಾಹುಲ್ ಈ ಹಿಂದೆ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ವಿಶ್ವಕಪ್ಗೂ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಯ 2-1 ಅಂತರದಲ್ಲಿ ಗೆಲ್ಲುವಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಇಲ್ಲಿನ ಯಶಸ್ವಿ ಫಲಿತಾಂಶವು ಕರುನಾಡ ಕುವರನಿಗೆ ದೀರ್ಘಕಾಲದವರೆಗೆ ಏಕದಿನ ನಾಯಕತ್ವ ನೀಡುವ ಸಾಧ್ಯತೆಯಿದೆ.