ಹುಬ್ಬಳ್ಳಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರ ಜನ್ಮದಿನದ ಪ್ರಯುಕ್ತ ಶುಭ ಕೋರಿದರು.
ಶೆಟ್ಟರ್ ನಿವಾಸಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಶೆಟ್ಟರ್ಗೆ ಹೂಗುಚ್ಛ ನೀಡಿ ಸಿ.ಎಂ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾರ ಹಾಕಲು ಮುಂದಾದಾಗ ಶೋಕಾಚರಣೆ ಇದೆ ಎಂದು ಸಿ.ಎಂ ನಿರಾಕರಿಸಿದರು.
ಬಳಿಕ ಶೆಟ್ಟರ್ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿದರು.