ಬೆಂಗಳೂರು:– ದೇವರನಾಡು ಕೇರಳಾದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಹೀಗಾಗಿ ನಮ್ಮಲಿಯೂ ಕೊರೊನಾ ಆತಂಕ ಮತ್ತೆ ಶುರುವಾಗಿದೆ. ಕಳೆದ ಮೂರು ವರ್ಷದಿಂದ ಭಾರತದಲ್ಲಿ ಮೊದಲ ಪ್ರಕರಣ ಕೇರಳದಲ್ಲೇ ಕಂಡು ಬಂದಿತ್ತು. ಈಗ ಮತ್ತೆ ಅದೇ ರಾಜ್ಯದಲ್ಲಿ ಸಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಮುಂಜಾಗ್ರತೆ ವಹಿಸುವಂತೆ ಸೂಚನೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಕೇರಳದಲ್ಲಿನ ಕೊರೊನಾ ಏರಿಕೆ ಆತಂಕ ರಾಜ್ಯಕ್ಕೆ ಡವ ಡವ ಶುರುವಾಗಿದೆ.
ಈಗಾಗಲೇ ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಈ ನಡುವೆ ಕೇರಳದಲ್ಲೂ ಕೊರೊನಾ ಏರಿಕೆ ಕಂಡಿದೆ. ಓಮಿಕ್ರಾನ್ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಪಕ್ಕದ ರಾಜ್ಯ ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಮ್ಮಲ್ಲಿಯೂ ಕೊರೊನಾ ಏರಿಕೆಯ ಆತಂಕ ಶುರುವಾಗಿದೆ.
ಜೆಎನ್.1 ಲಕ್ಷಣಗಳು?
ಜ್ವರ, ಕೆಮ್ಮು, ಸುಸ್ತು,
ಮೂಗು ಕಟ್ಟುವಿಕೆ,
ಸ್ರವಿಸುವ ಮೂಗು,
ಅತಿಸಾರ ಮತ್ತು ತಲೆನೋವು.
ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನಲೆ, ರಾಜ್ಯ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿದೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಿಂದ ಸಭೆ ನಡೆಸಲಾಯ್ತು ಸಚಿವರ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ರು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಜಾಗೃತ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ರು.