ಅಡುಗೆಯಲ್ಲಿ ಎಣ್ಣೆಯಂಶ ಹೆಚ್ಚಾಗಿದ್ದರೆ ನಾವು ಹೇಳುವ ಈ ಒಂದು ಸಲಹೆ ಪಾಲಿಸಿ. ಕೆಲವೊಮ್ಮೆ ಅಡುಗೆಯಲ್ಲಿ ಎಣ್ಣೆಯಂಶ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ಎಣ್ಣೆಯನ್ನು ತೆಗೆಯಲು ಈ ಸಲಹೆ ಪಾಲಿಸಿ.
ಜೋಳದ ಹಿಟ್ಟನ್ನು ನೀರಿನಲ್ಲಿ ಬೇಯಿಸಿ ನಂತರ ಸಾಂಬಾರಿಗೆ ಮಿಕ್ಸ್ ಮಾಡಿದರೆ ಅದು ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ.
ಹಾಗೇ ತರಕಾರಿಗಳನ್ನು ಬೇಯಿಸುವಾಗ ಎಣ್ಣೆಯಂಶ ಹೆಚ್ಚಾಗಿದ್ದರೆ ಅದಕ್ಕೆ ಕಡಲೆ ಹಿಟ್ಟು ಬಳಸಬಹುದು. ಕಡಲೆಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿದು ನಂತರ ತರಕಾರಿಯ ಜೊತೆಗೆ ಬೆರೆಸಿದರೆ ಎಣ್ಣೆಯಂಶ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.