ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಕಡಿಮೆ ಮಾಡಿಕೊಳ್ಳಲು ಈ ಸುದ್ದಿ ಸಂಪೂರ್ಣವಾಗಿ ಓದಿ. ಆರ್ಬಿಐ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಹೀಗಾಗಿ, ಗೃಹ, ವಾಹನ ಸೇರಿ ಬಹುತೇಕ ಸಾಲಗಳ ಬಡ್ಡಿ ದರವು ಮೊದಲಿನಿಂತೆಯೇ ಮುಂದುರಿದಿದೆ.
ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿದ ಪರಿಣಾಮ ಗ್ರಾಹಕರು ಪಡೆದುಕೊಂಡ ಬಹುತೇಕ ಸಾಲಗಳ ಮೇಲೆ ಬಡ್ಡಿ ದರ ಕೂಡ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ರೆಪೋ ದರ ಕಡಿಮೆಯಾಗಿ ತಮ್ಮ ಸಾಲದ ಬಡ್ಡಿ ಕಡಿಮೆಯಾಗುವ ಮೂಕಲ ಮಾಸಿಕ ಕಂತಿನ ಮೊತ್ತ ಕಡಿಮೆ ಆಗಬಹುದು ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ.
ಅಕ್ಟೋಬರ್ 2019 ರಿಂದ, ಬ್ಯಾಂಕ್ಗಳು ನೀಡುವ ಎಲ್ಲಾ ಫ್ಲೋಟಿಂಗ್ ದರದ ಸಾಲಗಳನ್ನು (floating rate loans) ಬಾಹ್ಯ ಮಾನದಂಡ ಆಧಾರಿತ ಸಾಲ ದರಕ್ಕೆ (EBLR) ಲಿಂಕ್ ಮಾಡಲಾಗಿದೆ, ಇದು ಚಿಲ್ಲರೆ ಸಾಲಗಳ ಸಂದರ್ಭದಲ್ಲಿ ವಿಧಿಸಲಾಗುವ ರೆಪೋ ದರವಾಗಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆಯಾದರೆ, ಅಂದರೆ ರೆಪೋ ಬಡ್ಡಿ ದರದಲ್ಲಿ ಏರಿಕೆ ಅಥವಾ ಕಡಿತವಾದರೆ ಅದನ್ನು ಸಾಲಗಾರರಿಗೆ ವರ್ಗಾಯಿಸಲಾಗುತ್ತದೆ.
ಮೇ 2022 ಮತ್ತು ಫೆಬ್ರವರಿ 2023ರ ನಡುವೆ ಆರ್ಬಿಐ ರೆಪೋ ದರವನ್ನು 250 ಅಂಕಗಳಷ್ಟು ಏರಿಸಿ ಶೇಕಡಾ 6.5ಕ್ಕೆ ಹೆಚ್ಚಿಸಿದೆ. ಇದರಿಂದಾಗಿ, ಗೃಹ ಸಾಲದ ದರಗಳು ಏರಿಕೆಯಾಗಿ ಸಾಲಗಾರರ ಹೊರೆಯನ್ನು ಹೆಚ್ಚಿಸಿವೆ. ಪ್ರಸ್ತುತ, ಅನೇಕ ಬ್ಯಾಂಕುಗಳು 8.4 ರಿಂದ 11 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿವೆ.
ಈಗ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದರೂ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ನೀವು ಕಡಿಮೆ ಮಾಡಿಕೊಳ್ಳಲು ಒಂದಿಷ್ಟು ಅವಕಾಶವಿದೆ. ಬಡ್ಡಿ ದರದಲ್ಲಿ ಕಡಿತಕ್ಕಾಗಿ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಎಂದು ಪರಿಣತರು ಸಲಹೆ ನೀಡುತ್ತಾರೆ,
ಗೃಹ ಸಾಲ ಪಡೆದುಕೊಂಡವರು ತಮ್ಮ ಅಸ್ತಿತ್ವದಲ್ಲಿರುವ ಬಡ್ಡಿ ದರ ಹಾಗೂ ಹೊಸದಾಗಿ ಗೃಹ ಸಾಲಗಾರರಿಗೆ ನೀಡುತ್ತಿರುವ ಬಡ್ಡಿ ದರದ ನಡುವೆ ವ್ಯತ್ಯಾಸವಿದೆಯೇ ಎಂಬುದನ್ನು ಗಮನಿಸಬೇಕು. ಹೊಸದಾಗಿ ಗೃಹ ಸಾಲ ನೀಡುವವರಿಗೆ ಬಡ್ಡಿ ದರ ಕಡಿಮೆ ವಿಧಿಸಲಾಗುತ್ತಿದ್ದರೆ ನೀವೂ ಕೂಡ ನಿಮ್ಮ ಸಾಲದ ಬಡ್ಡಿ ದರ ಕಡಿತಗೊಳಿಸಲು ವಿನಂತಿಸಬಹುದು ಎಂದು ಅವರು ವಿವರಿಸುತ್ತಾರೆ.
ಈ ಕುರಿತು ನೀವು ಇಮೇಲ್ ವಿನಂತಿಯನ್ನು ಕಳುಹಿಸಬೇಕು. ಬ್ಯಾಂಕ್ಗೆ ಮರುಪಾವತಿ / ಪರಿವರ್ತನೆ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕವು ಬಾಕಿ ಇರುವ ಸಾಲದ ಮೊತ್ತದ 0.25 ರಿಂದ0.50 ಪ್ರತಿಶತದವರೆಗೆ ಇರುತ್ತದೆ. ಪರಿವರ್ತನೆ ಶುಲ್ಕ ಪಾವತಿ ಮತ್ತು ಬಡ್ಡಿ ದರ ಕಡಿತದಿಂದಾಗುವ ಉಳಿತಾಯ- ಈ ಎರಡನ್ನೂ ಲೆಕ್ಕಾಚಾರ ಹಾಕಿದ ನಂತರ ನೀವು ಮುಂದಿನ ಕ್ರಮ ಕೈಗೊಳ್ಳಬೇಕು. ಈ ಮೂಲಕ ಗೃಹ ಸಾಲದ ಇಎಂಐ ಪಾವತಿ ಮೊತ್ತದಲ್ಲಿ ಉಳಿತಾಯ ಮಾಡಬಹುದು ಎಂದು ಹೇಳಲಾಗಿದೆ.