ಸಂಡೂರು:– ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ದಿನಾಂಕ 16-12-2023 ರಂದು ಆರೋಗ್ಯ ಆಯುಷ್ ಮತ್ತು ಕ್ಷೇಮಾಭಿವೃದ್ಧಿ ಅಡಿಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಯೋಗಾ ತರಬೇತಿ ಕಾರ್ಯಕ್ರಮ ಸಹಕಾರ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿ.ಸಿ.ಎಂ) ಹೊಸದರೋಜಿ ಹಮ್ಮಿಕೊಳ್ಳಲಾಗಿತ್ತು.
ನಮ್ಮ ಆರೋಗ್ಯ ಚೆನ್ನಾಗಿ ಇರಬೇಕಾದರೆ ದಿನ ನಿತ್ಯ ನಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳೊಳಲು ದಿನ ನಿತ್ಯ ಯೋಗಾಭ್ಯಾಸ ಮತ್ತು ಧ್ಯಾನ ಮಾಡಬೇಕು ಎಂದು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೇರವೇರಿಸಿ ಆರ್ಯವೇದಿಕ ಡಾಕ್ಟರ್ ಡಾ.ಫಣೀಂಧರ ಉದ್ಘಾಟಕರ ನುಡಿಯನ್ನು ನುಡಿದರು.
ನೆಮ್ಮದಿ ಎಂಬುವುದು ಈಗೀನ ಜನರಲ್ಲಿ ಇಲ್ಲ ಪ್ರತಿ ನಿತ್ಯ ಜಂಜಾಟದಲ್ಲಿ ಮುಳುಗಿ ಹೋಗುವುದನ್ನು ಕಾಣುತ್ತೇವೆ.ಸುಖವಾಗಿ ಜೀವನ ನಡೆಸಲು ಆಗುತ್ತಿಲ್ಲ ಏಕೆಂದರೆ ನಾವು ಊಟ ಮಾಡುವ ಜಿಂಗಾ ಆಹಾರವನ್ನು ಸೇವನೆ ಮಾಡುತ್ತೇವೆ. ಅದಕ್ಕಾಗಿ ನಮಗೆ ಬೆಳಿಗ್ಗೆ ಏಳಲು, ನಡೆಯಲು ಆಗುತ್ತಿಲ್ಲ. ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲಿ ಕ್ಯಾಮಿಕಲ್ಸ್ ಒಳಗೊಂಡಿರುವುದು ತಿನ್ನುತ್ತೇವೆ. ಅದಕ್ಕಾಗಿ ನಾವೆಲ್ಲರೂ ದಿನ ನಿತ್ಯ ಆರೋಗ್ಯವಾಗಿ ಇರಲು ತಾಜಾ ಹಣ್ಣುಗಳನ್ನು ಮತ್ತು ತಾಜಾ ತರಕಾರಿಗಳನ್ನು ನಮ್ಮ ದಿನ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು.ಮತ್ತೆ ದಿನ ಬೆಳಿಗ್ಗೆ ಯೋಗಾಸನ ಮಾಡಬೇಕು ಧ್ಯಾನ ಕೈಗೊಳ್ಳಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗಿಯಾದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದ ಉಪನ್ಯಾಸಕ ಕುರುಬರ ಹೇಮೇಶ್ವರ ಹೇಳಿದರು.
ನಮ್ಮ ದಿನ ನಿತ್ಯ ಜೀವನದಲ್ಲಿ ಬಹಳಷ್ಟು ಬೇಸರವನ್ನು ಒನುಭವಿಸುತ್ತ ಹೋಗುತ್ತೇವೆ. ನಮ್ಮ ಬೇಸರ ಜೀವನವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿ ಕೊಂಡಾಗ ಜೀವನ ಉಲ್ಲಾಸವಾಗಿ ಇರಲು ಸಾಧ್ಯ ಅದಕ್ಕಾಗಿ ಪ್ರತಿ ದಿನ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಯೋಗ ಉಪನ್ಯಾಸಕ ಡಿ.ಮಹೇಶ ಬಾಬು ಹೇಳಿದರು.
ಕಾರ್ಯಕ್ರಮ:-ಆರೋಗ್ಯ ಆಯುಷ್ ಮತ್ತು ಕ್ಷೇಮಾಭಿವೃದ್ಧಿ ಅಡಿಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಯೋಗಾ ತರಬೇತಿ ಮತ್ತು ಸಸಿಯನ್ನು ನೆಡುವುದರ ಮೂಲಕ ಕಾರ್ಯಕ್ರಮಗಳನ್ನು ನೇರವೇರಿಸಿದರು.
ಕಾರ್ಯಕ್ರಮದಲ್ಲಿ:- ಆಯುಷ್ ಇಲಾಖೆಯ ಔಷಧಿ ವಿತರಕರು ಗಂಗಾಧರ ಎನ್. ಹೊನ್ನುರಮ್ಮ,ರತ್ನಮ್ಮ ಹಾಗೂ ವಿದ್ಯಾರ್ಥಿಗಳಾದ ಗೀತಾ,ಸಂಜನಾ,ಐಶು,ಅನು,ಜ್ಯೋತಿ,ಆಲಂಬಿ,ಭವಾನಿ ಕೆ,ಈರಮ್ಮ,ಭೀಮಮ್ಮ,ಸೌಮ್ಯ,ಜ್ಯೋತಿ ಕೆ,ಸ್ವಪ್ನ,ಜ್ಯೋತಿ ಯು,ರಾಜಶ್ವೇರಿ,ಪಾರ್ವತಿ ಕೆ,ಗೌತಮಿ ಪವಿತ್ರ,ಕಾವೇರಿ ಮತ್ತೀತರು ಇದ್ದರು, ನಿರೂಪಣೆ ಗೀತಾ,ಸ್ವಾಗತ ಅನು,ಪ್ರಾರ್ಥನೆ ವಿ ಈರಮ್ಮ , ಸಂಜನ ವಂದಿಸಿದರು…..