IPL 2024 IPL ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಿದ್ದು, ವ್ಯಾಪಕ ಆಕ್ರೋಶ ಹಾಗೂ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಇತ್ತ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಹಾರ್ದಿಕ್ ಪಾಂಡ್ಯರನ್ನು ನೂತನ ಕ್ಯಾಪ್ಟನ್ ಎಂದು ಘೋಷಿಸಿದ ಪರಿಣಾಮ ಸಾಮಾಜಿಕ ಜಾಲತಾಣದ ಮೇಲೆ ಬೀರಿದ್ದು, ಘೋಷಣೆಯಾದ ಒಂದು ಘಂಟೆಯೊಳಗೆ 400,000 ಅನುಯಾಯಿಗಳು ಅನ್ಫಾಲೋ ಮಾಡಿದ್ದಾರೆ. ಇತ್ತ ರೋಹಿತ್ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಿ. 360 ಖ್ಯಾತಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಮರಳಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಬೇಕೇ ಹೊರತು ಈ ರೀತಿ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ. ನ್ಯಾಯೋಚಿತವಾಗಿ ಹೇಳಬೇಕೆಂದರೆ ಹಾರ್ದಿಕ್ ಪಾಂಡ್ಯ ಅವರು ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು.
ಮೂರು ಭಾರಿ ತಂಡ ಪ್ರಶಸ್ತಿ ಜಯಿಸಿದಾಗ ಅವರು ಜೊತೆಗಿದ್ದರು. ಕೆಲವೊಂದು ಘಟನೆ ಹಾಗೂ ಅವರ ನಿರ್ಧಾರದಿಂದ ಬೇರೊಂದು ತಂಡಕ್ಕೆ ಹೋಗಿದ್ದರು. ಆದರೆ, ಅವರು ತಂಡಕ್ಕೆ ಮರಳಿದ್ದು, ಅವರನ್ನು ನಾಯಕತ್ವ ವಹಿಸಲಾಗಿದೆ
ಪಾಂಡ್ಯರನ್ನು ನಾಯಕನನ್ನಾಗಿ ಮಾಡಿದ ಮೇಲೆ ಜನರು ಪ್ರತಿಕ್ರಿಯೆಯು ಬಹಳ ಋಣಾತ್ಮಕವಾಗಿದೆ. ಇದು ನನಗೆ ಬಹಳ ವಿಚಿತ್ರ ಎನ್ನಿಸಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನಗೊಂಡಿರುವ ಹಲವು ಪೋಸ್ಟ್ಗಳನ್ನು ನೋಡುತ್ತಿದ್ದೇನೆ.