ಬೆಂಗಳೂರು: ಆ ಜೋಡಿ.ದುಡ್ಡಿರೊ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ರು.ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡ್ತೀವಿ ಕಲರ್ ಕಲರ್ ಟೋಪಿ ಹಾಕ್ತಿದ್ರು ಕಲರ್ ಜೆರಾಕ್ಸ್ ತೋರಿಸಿ ವರ್ಜಿನಲ್ ಅಂತ ಕಾಗೆ ಹಾರಿಸ್ತಿದ್ರು. ಒಂದು ಸಣ್ಣ ಸುಳಿವು ಸಿಕ್ಕಿದ್ದೇ ತಡ ಸಿಸಿಬಿ ಪೊಲೀಸರು ಒಂದು ವಾರ ಹಿಂದೆ ಬಿದ್ದಿದ್ದಾರೆ..ನಂತರ ಏನಾಯ್ತು ಈ ಸ್ಟೋರಿ ನೋಡಿ
ಈ ಪೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಇಮ್ರಾನ್ ಶೇಕ್.ದೇಹಲಿ ಮೂಲದವ್ನು.ಪತ್ನಿ ರುಕ್ಸಾನ ಜೊತೆಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ ನನ್ನ ಹತ್ರ ದುಬೈ ಧಿರಾಮ್ ಕರೆನ್ಸಿ ಇದೆ ಕಡಿಮೆ ಬೆಲೆಗೆ ಅಂದ್ರೆ 50-50 ರೇಟ್ ಕೊಡ್ತೀನಿ ಅಂತಾ ವಂಚಿಸಲು ಹೊಂಚು ಹಾಕ್ತಿದ್ದ.
ಹೌದು..ಬೆಂಗಳೂರಲ್ಲಿ ವಾಸವಿದ್ದ ಇಮ್ರಾನ್ ಶೇಕ್ ಮತ್ತು ರುಕ್ಸಾನ ದಂಪತಿ ಮೂರನೇ ವ್ಯಕ್ತಿ ಮೂಲಕ ದುಡ್ಡಿರೊ ಉದ್ಯಮಿಗಳ ಪರಿಚಯ ಮಾಡಿಕೊಳ್ತಿದ್ರು.ಸ್ವಲ್ಪ ದಿನ ನಯವಾಗಿ ವರ್ತಿಸಿ ಬಳಿಕ ಅಸಲಿ ಬುದ್ಧಿ ತೋರಿಸ್ತಿದ್ರು..ನಮ್ಹತ್ರ ಕಂತೆ ಕಂತೆ ದುಬೈ ಮೂಲದ ಕರೆನ್ಸಿ ಧಿರಾಮ್ ಇದೆ.ಅದರ ಬೆಲೆ ಭಾರತೀಯ ರೂಪಾಯಿಗೆ ಹೋಲಿಸಿಕೊಂಡ್ರೆ 22 ರಿಂದ 25 ರೂಪಾಯಿ ಆಗುತ್ತೆ.ಅದನ್ನ 12 ರೂಪಾಯಿಗೆ ಕೊಡ್ತಿವಿ ಅಂತಾ ನಂಬಿಸ್ತಿದ್ರು..ನಂಬಿಕೆ ಬರೋದಕ್ಕೆ ಅಂತಾ ಮೊದಲು ಒಂದು ಒರಿಜಿನಲ್ ನೋಟನ್ನ ಉದ್ಯಮಿ ಕೈಗೆ ಇಡ್ತಿದ್ರು.
ಉದ್ಯಮಿ ನಂಬಿ ಹಣ ನೀಡ್ತಿದ್ದಂತೆ ಕಲರ್ ಕಲರ್ ಜೆರಾಕ್ಸ್ ಹಣ ಆತನ ಕೈಗಿಟ್ಟು ಪರಾರಿ ಆಗಿಬಿಡ್ತಿದ್ರು..ಯಾವಾಗ ಟೋಪಿ ಬಿತ್ತು ಅಂತಾ ಉದ್ಯಮಿಗೆ ಗೊತ್ತಾಯ್ತೋ ಸೀದಾ ಸೀದಾ ಬಂದವನೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ.ಸತತ ಒಂದು ವಾರ ಆರೋಪಿಗಳ ಹಿಂದೆ ಬಿದ್ದ ಸಿಸಿಬಿ ತಂಡ ಮಡಿವಾಳ ಮಾರ್ಕೆಟ್ ಬಳಿ ಇಮ್ರಾನ್ ಶೇಕ್ ನನ್ನ ಬಂಧಿಸಿದ್ದಾರೆ.ರುಕ್ಸಾನಾ ಪರಾರಿಯಾಗಿದ್ದು ಆಕೆಯ ಬಳಿ ಮತ್ತಷ್ಟು ದುಬೈ ಕರೆನ್ಸಿ ಹಾಗೂ ಜೆರಾಕ್ಸ್ ಕಾಪಿ ಇದೆ ಎನ್ನಲಾಗ್ತಿದೆ.ಸದ್ಯ ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು,ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ
ಏನೇ ಹೇಳಿ ಹಣ ಡಬಲ್ ಆಗುತ್ತೆ ಅಂತ ಈ ರೀತಿ ಮೋಸ ಹೋಗುವವರು ಇರುವವರೆಗೂ ಇಂತಹ ಕತರ್ನಾಕ್ಕಳು ಟೋಪಿ ಹಾಕಲೇ ಇರ್ತಾರೆ. ಸದ್ಯ ವಿದೇಶಿ ಕರೆನ್ಸಿ ಜೊತೆ ಎಸ್ಕೇಪ್ ಆಗಿರೊ ಪತ್ನಿಗಾಗಿ ಸಿಸಿಬಿ ಹುಡುಕಾಟ ನಡೆಸಿದೆ….