ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ 64ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವ್ರು ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕುರ್ಕಿ ರಾಜೇಶ್ವರಿ ಸುಮಾರು 19 ವರ್ಷಗಳಿಂದ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಸಾಯಿಬಾಬಾ ದೇವಸ್ಥಾನದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಯಲ್ಲಿ ಆಚರಿಸಿತ್ತಿದ್ದೆವೆ. ದೇವರು ಅವರಿಗೆ ಹೆಚ್ಚಿನ ಆರೋಗ್ಯ ಆಯಸ್ಸು ನೀಡುವದರ ಜೊತೆಗೆ ನಾಡಿನ ಜನರ ಕಷ್ಟ ದುಃಖಗಳಿಗೆ ಸ್ವಂದಿಸುವ ಅಧಿಕಾರವನ್ನು ಮತ್ತೊಮ್ಮೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ.
ಕಳೆದ ಬಾರಿಯೂ ಪಂಚರತ್ನ ಯೋಜನೆಗಳ ಮೂಲಕ ರೈತರ ಬಡವರ ಅಭಿವೃದ್ಧಿಯ ಪರವಾದ ಯೋಜನೆಗಳನ್ನು ರೂಪಿಸಲು ಅವಕಾಶ ಸಿಗಲಿಲ್ಲ ಮುಂದೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡುವಂತಾಗಲಿ ಎಂದು ತಿಳಿಸಿದ್ರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ಕೃಷಿಕ ಸಮಾಜದ ಉಪಾಧ್ಯಕ್ಷ ಚಿಕ್ಕಹಸಾಳ ಕೃಷ್ಣಪ್ಪ, ದಕ್ಷಿಣ ಕಸಬಾ ಸೊಸೈಟಿ ನಿರ್ದೇಶಕ ದಿಂಬ ನಾಗರಾಜಗೌಡ, ನರಸಾಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಹರೀಶ್ ಗೌಡ ಮುತಾಂದವರು ಉಪಸ್ಥಿತರಿದ್ದರು.