ಕಾಲಿವುಡ್ ಯುವ ನಿರ್ದೇಶಕ ಅಧಿಕ್ ರವಿಚಂದ್ರನ್ (Adhik Ravichandran) ಅವರು ಐಶ್ವರ್ಯ ಪ್ರಭು (Aishwarya Prabhu) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟ ಪ್ರಭು ಅವರ ಪುತ್ರಿ ಐಶ್ವರ್ಯ ಜೊತೆ ನಿರ್ದೇಶಕ ಅಧಿಕ್ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ತ್ರಿಶಾ ಇಲ್ಲ ನಯನತಾರಾ, ದಬಂಗ್ 3, ಮಾರ್ಕ್ ಆ್ಯಂಟನಿ ಸಿನಿಮಾಗಳ ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಐಶ್ವರ್ಯ ಪ್ರಭು ಜೊತೆ ಇಂದು (ಡಿ.15) ಚೆನ್ನೈನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.
ಕನ್ನಡದ ದೃಶ್ಯ, ಪವರ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಪ್ರಭು ಅವರ ಪುತ್ರಿ ಐಶ್ವರ್ಯಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಮದುವೆ ತಂದೆ ಪ್ರಭು ಅವರ ತಂಗಿ ಮಗನ ಜೊತೆ ನೆರವೇರಿತ್ತು. ವೈಯಕ್ತಿಕ ಮನಸ್ತಾಪಗಳಿಂದ ಹೆಚ್ಚು ದಿನ ಆ ದಾಂಪತ್ಯ ಉಳಿಯಲಿಲ್ಲ. ಡಿವೋರ್ಸ್ನಲ್ಲಿ ಐಶ್ವರ್ಯ ಮೊದಲ ಮದುವೆ ಅಂತ್ಯವಾಗಿತ್ತು.