ಬಳ್ಳಾರಿ: ಸಂಕಷ್ಟದಲ್ಲಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆಗಾರರಿಗೆ ನೀರು ಒದಗಿಸುವಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ.ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಜೊತೆ ರೈತ ಮುಖಂಡರುಗಳ ಸಭೆ ನಡೆಸಿದರು.
ಹೆಚ್ ಎಲ್ ಸಿ ಕಾಲುವೆ ನೀರು ಬಿಡುವ ಅವಧಿ ಮುಗಿದಿದ್ದರೂ ಸಹ, ಐದು ದಿನಗಳ ಕಾಲ ಕಾಲುವೆಗೆ ಹೆಚ್ಚುವರಿ ನೀರು ಬಿಡಿಸುವ ಮೂಲಕ ಜಿಲ್ಲೆಯ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವಲ್ಲಿ ಸಚಿವ ನಾಗೇಂದ್ರ ಅವರು ಯಶಸ್ವಿಯಾಗಿದ್ದಾರೆ. ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಎತ್ತಿನಬುದಿಹಾಳ್ ಬಳಿಯ ೧೫,೧೬,೧೬ಎ ಡಿಸ್ಟ್ರಿಬ್ಯೂಟರ್ ಗೆ ರೈತರೊಂದಿಗೆ ಭೇಟಿ ನೀಡಿ ವೀಕ್ಷಿಸಿದರು. ರೈತರ ಹಿತ ಕಾಪಾಡುವ ಕೆಲಸ ಮಾಡಿ, ಜಮೀನುಗಳಿಗೆ ನೇರವಾಗಿ ನೀರು ಒದಗಿಸುವ ಕಾರ್ಯವನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಸಚಿವ ನಡೆಯನ್ನು ರೈತರು ಪ್ರಶಂಸಿದ್ದಾರೆ.