ಹಬ್ಬ ಬಂದಾಗ ಮಕ್ಕಳು ಪ್ರತೀ ಸಲ ಬಯಸುವುದು ಏನು? ಇದರ ಬಗ್ಗೆ ಯೋಚನೆಯೇ ಬೇಡ. ಪ್ರತೀ ಮಕ್ಕಳು ಹಬ್ಬಗಳಲ್ಲಿ ಪೋಷಕರಿಂದ ನಿರೀಕ್ಷಿಸುವುದು ಮೊದಲಿಗೆ ಹೊಸ ಬಟ್ಟೆಗಳನ್ನು. ಇನ್ನೆನು ಕ್ರಿಸ್ಮಸ್ ಬಂದೇ ಬಿಟ್ಟಿತು. ಹೀಗಿರುವಾಗ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಖರೀದಿಸುವ ಯೋಜನೆಯಂತೂ ನೀವು ಮಾಡೇ ಇರುತ್ತೀರಿ. ಆದರೆ ಮಕ್ಕಳಿಗೆ ಯಾವ ತರಹದ ಬಟ್ಟೆಯನ್ನು ಕೊಳ್ಳುವುದು ಎಂಬ ಗೊಂದಲ ನಿಮ್ಮಲ್ಲಿ ಇದ್ದರೆ, ಇಲ್ಲಿರುವ ಕೆಲವು ಟಿಪ್ಸ್ ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ ಕೊಳ್ಳಲು ನಿಮಗೆ ಖಂಡಿತಾ ಸಹಾಯ ಮಾಡಬಲ್ಲದು.
ಚಿಕ್ಕ ಚಿಕ್ಕ ಪ್ರಿಂಟ್ಗಳಿರುವ ಸ್ಲೀಪ್ ಸೂಟ್ ಸೆಟ್:
ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್ಗನ್ನು ಧರಿಸಲು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ಎಲ್ಲಾ ವಯೋಮಾನದ ಜನರಿಗೂ ಸಜೆಸ್ಟ್ ಮಾಡಬಹುದು. ಮಕ್ಕಳಿಗೆ ಹತ್ತಿಯ ಬಟ್ಟೆಯ ಸ್ಲೀಪ್ ಸೂಟ್ನಲ್ಲಿ ಪುಟ್ಟ ಪುಟ್ಟ ಗಾತ್ರದ ಪ್ರಿಂಟ್ ಗಳಿದ್ದರೆ ಮಕ್ಕಳು ಎಷ್ಟು ಮುದ್ದಾಗಿ ಕಾಣಿಸುತ್ತಾರಲ್ಲಾ?
ಕ್ರಿಸ್ಮಸ್ ಹಬ್ಬಕ್ಕಾದರೆ ಪ್ರಿಂಟ್ಗಳಲ್ಲಿ ಕ್ರಿಸ್ಮಸ್ ಟ್ರೀ, ಸಾಂತಾ, ಉಡುಗೊರೆ ಇಂತಹ ಹಲವು ಚಿತ್ರಗಳಿದ್ದರೆ ಮಕ್ಕಳೂ ಅದನ್ನು ಇಷ್ಟ ಪಡುತ್ತಾರೆ ಜೊತೆಗೆ ಅವರ ನಿದ್ರೆಯೂ ಆರಾಮದಾಯಕವಾಗುತ್ತದೆ.
ಸಾಂತಾ ಕ್ಲಾಸ್ ಬಟ್ಟೆ:
ನಿಮ್ಮ ಮಕ್ಕಳನ್ನೇ ಸಾಂತಾ ಕ್ಲಾಸ್ನಂತೆ ಡ್ರೆಸ್ಅಪ್ ಮಾಡಿದರೆ ಹೇಗಿರುತ್ತೆ? ಕೆಂಪು ದಿರಸಿನ ಸಾಂತಾ ನಿಮ್ಮ ಮನೆಯಲ್ಲೇ ಪುಟ್ಟ ಪುಟ್ಟ ಹೆಜ್ಜೆನ್ನಿಡುತ್ತ ಓಡಾಡಿಕೊಂಡಂತೆ ಭಾಸವಾಗುವುದಿಲ್ಲವೇ? ಸಾಂತಾವನ್ನು ಇಷ್ಟ ಪಡುವ ಮಕ್ಕಳೂ ಖುಷ್, ಅವರನ್ನು ನೋಡಿ ಆನಂದಿಸುವ ಹಿರಿಯರೂ ಖುಷ್.
ಹೆಣ್ಣು ಮಕ್ಕಳಿಗೆ ಸಾಂತಾ ಫ್ರಾಕ್:
ಸಾಂತಾ ಕ್ಲಾಸ್ ಸೂಟ್ ಯಾವಗಾಲೂ ಗಂಡು ಮಕ್ಕಳಿಗೆ ಸರಿ ಹೊಂದುತ್ತದೆ. ಹಾಗಿದ್ದರೆ ಹೆಣ್ಣು ಮಕ್ಕಳಿಗೆ? ಅವರಿಗೂ ಮಿಸ್ ಸಾಂತಾ ಕಾಸ್ಟ್ಯೂಮ್ ಕೊಡಿಸಿ. ಇದರಲ್ಲಿ ಕೆಂಪು ಬಣ್ಣದ ಫ್ರಾಕ್, ಟೊಪ್ಪಿ ಕಪ್ಪು ಶೂ ಮತ್ತು ಬೆಲ್ಟ್ ಇದ್ದರೆ ಮುಗೀತು. ಹೆಣ್ಣು ಮಕ್ಕಳೂ ಜಿಂಗಲ್ ಬೆಲ್ ಕ್ಲಬ್ನ ಭಾಗವಾಗಬಹುದು
ಬೇಬಿ ರೋಂಪರ್:
ನಡೆದಾಡುವ, ಶಾಲೆಗೆ ಹೋಗುವ ಮಕ್ಕಳಿಗೆ ಫ್ಯಾನ್ಸಿ ಬಟ್ಟೆಗಳನ್ನು ಖರೀದಿಸಬಹುದು. ಆದರೆ ನವಜಾತ ಶಿಶುಗಳಿಗೆ ಹಬ್ಬಕ್ಕೆ ಏನು ಕೊಳ್ಳುವುದು? ಈ ಗೊಂದಲಕ್ಕೆ ಪರಿಹಾರ ಒಂದೇ. ಇನ್ನೂ ತೊಟ್ಟಿಲಿರುವ ಮಕ್ಕಳಿಗೆ ಮಾರುಕಟ್ಟೆಯಲ್ಲಿ ಬೇಬಿ ರೋಂಪರ್ ಲಭ್ಯವಿರುತ್ತದೆ. ಹಬ್ಬಕ್ಕೆ ಸರಿ ಹೊಂದುವ ವಿನ್ಯಾಸದ, ಹತ್ತಿ ಬಟ್ಟೆಯ ರೋಂಪರ್ ಪುಟ್ಟ ಮಕ್ಕಳಿಗೆ ಪರ್ಫೆಕ್ಟ್ ಮ್ಯಾಚ್.