ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್. ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್ ಹಾಗೂ ಜೂನಿಯರ್ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ.
ಆರ್ಎಸ್ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಸ್ ಒನ್ ವಿಜ್ಞಾನ ವಿಭಾಗದಲ್ಲಿ (PCMB) ವಿದ್ಯಾಭ್ಯಾಸ ಮಾಡುತ್ತಿರುವ ಗಣ್ಯ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು, ಯೋಗಾಭ್ಯಾಸದಲ್ಲೂ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಸರಗೋಡು ಯೋಧ ಟೆಕ್ವಾಂಡೋ ಅಕಾಡೆಮಿಯಲ್ಲಿ ಜಯನ್ ಪೊಯಿನಾಚಿ ಅವರಿಂದ ಗಣ್ಯ ತರಬೇತಿ ಪಡೆದಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿರುವ ಬಿ.ನವೀನ್ ಕುಮಾರ್ ಮತ್ತು ಕಾಸರಗೋಡು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಫ್ರಂಟ್ ಆಫೀಸ್ ಮ್ಯಾನೇಜರ್ ಆಗಿರುವ ರಾಜೇಶ್ವರಿ ದಂಪತಿಯ ಪುತ್ರಿ ಗಣ್ಯ. ಇವರ ಪುತ್ರ ಘನಶ್ಯಾಂ ಯೋಗಾಸನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ