ಕಾಸರಗೋಡು: ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಟೆಕ್ವಾಂಡೋದಲ್ಲಿ ಚಿನ್ನದ ಪದಕ ಗೆದ್ದು, (Taekwondo) ಕನ್ನಡತಿ ಎನ್. ಗಣ್ಯ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕಾಸರಗೋಡು (Kasaragod) ಜಿಲ್ಲೆಯ ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿನಿಯಾಗಿರುವ ಗಣ್ಯ, 17 ವರ್ಷದೊಳಗಿನ ಬಾಲಕಿಯರ 50-65 ಕೆಜಿ ವಿಭಾಗದಲ್ಲಿ ಮಿಂಚಿದರು. ಗಣ್ಯ ಸಾಧನೆಯಿಂದಾಗಿ ಕಾಸರಗೋಡು ಜಿಲ್ಲೆ ಸೀನಿಯರ್ ಹಾಗೂ ಜೂನಿಯರ್ ಟೆಕ್ವಾಂಡೋ (Junior Taekwondo) ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದಿದೆ.
ಆರ್ಎಸ್ಸಿ ಎರ್ನಾಕುಳಂನಲ್ಲಿ (Ernakulam) ನಡೆದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದ ಗೆಲುವಿನೊಂದಿಗೆ ಗಣ್ಯ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಅ`ಗಣ್ಯʼ ಸಾಧನೆ..!: ಟ್ವೆಕಾಂಡೋ ಮಾತ್ರವಲ್ಲ ಗಣ್ಯಗೆ ಇತರೆ ಕ್ರೀಡೆಗಳಲ್ಲೂ ಆಸಕ್ತಿ ಇದೆ. ಗಣ್ಯಳ ಸಾಧನೆಯ ಕಿರುವಿವರ ಇಲ್ಲಿದೆ ನೋಡಿ.
- 2022ರಲ್ಲಿ ಕಾಸರಗೋಡು ಜಿಲ್ಲೆಯ ಪಡನ್ನಕ್ಕಾಡ್ನಲ್ಲಿ ನಡೆದ 23ನೇ ಕಾಸರಗೋಡು ಜಿಲ್ಲಾ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
- 2018ರಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಟ್ವೆಕಾಂಡೋ ಸಬ್ ಜೂನಿಯರ್ ಚಾಂಪಿಯನ್ಶಿಪ್ (38 ವರ್ಷದೊಳಗಿನ ವಿಭಾಗ) – ಕ್ಯೊರೂಗಿ (Sparring) – ಬೆಳ್ಳಿ ಪದಕ
- 2019ರಲ್ಲಿ ಕಾಸರಗೋಡು ಜಿಲ್ಲಾಮಟ್ಟದ ಟ್ವೆಕಾಂಡೋ ಸಬ್ ಜೂನಿಯರ್ (48 ಕೆಜಿಯೊಳಗಿನ ವಿಭಾಗ) – ಚಿನ್ನದ ಪದಕ
- 2018ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಶಾಲಾ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ
- 2019ರಲ್ಲಿ ಕರ್ನಾಟಕದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಶಾಲಾ ಮಟ್ಟದ ಕರಾಟೆ ಚಾಂಪಿಯನ್ಶಿಪ್ – ಕಂಚಿನ ಪದಕ
- 2022-23ನೇ ಶೈಕ್ಷಣಿಕ ವರ್ಷದಲ್ಲಿ ಪಾಲಕ್ಕಾಡ್ನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
- 2019-2020ನೇ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 800 ಮೀಟರ್ ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನ
- 2022-23ನೇ ಸಾಲಿನ ಕಾಸರಗೋಡು ಜಿಲ್ಲಾ ಮಟ್ಟದ ಯೋಗ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ.
- 2018-19ರಲ್ಲಿ ಪಾಲಕ್ಕಾಡ್ನಲ್ಲಿ ನಡೆದ ರಾಜ್ಯಮಟ್ಟದ ಶಾಸ್ತ್ರಮೇಳದಲ್ಲಿ ನಂಬರ್ ಚಾರ್ಟ್ಗೆ ತೃತೀಯ ಸ್ಥಾನ.
- 2019-20ರಲ್ಲಿ ಜಿಲ್ಲಾ ಮಟ್ಟದ ವೇದಿಕ್ ಮ್ಯಾಥ್ಸ್ ಪೇಪರ್ ಪ್ರೆಸೆಂಟೇಷನ್ – ಪ್ರಥಮ ಸ್ಥಾನ
- ರಾಜ್ಯ ಮಟ್ಟದ ಗಣಿತ ಶಾಸ್ತ್ರ ಮೇಳದಲ್ಲಿ ಗಣಿತ ಪೇಪರ್ ಪ್ರೆಸೆಂಟೇಷನ್ – ಎ ಗ್ರೇಡ್