ಬೆಂಗಳೂರು:- ಉದ್ಯಮಿಯನ್ನ ಟ್ರಾಪ್ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸು ಅರೆಸ್ಟ್ ಮಾಡಿದ್ದಾರೆ. ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳು..
ಅತೀವುಲ್ಲಾ ಎಂಬ ಉದ್ಯಮಿಯನ್ನ ಆರೋಪಿಗಳು ಟ್ರ್ಯಾಪ್ ಮಾಡಿದ್ದರು. ಬಂಧಿತ ಆರೋಪಿಗಳಲ್ಲಿ ಖಲೀಮ್ ಮತ್ತು ಸಭಾ ಇಬ್ಬರೂ ಗಂಡ ಹೆಂಡತಿ.. ಅತೀವುಲ್ಲಾಗೆ ಪತ್ನಿ ಸಭಾಳನ್ನ ವಿಧವೆ ಅಂತಾ ಖಲೀಮ್ ಪರಿಚಯ ಮಾಡಿಸಿಕೊಟ್ಟಿದ್ದ. ಪರಿಚಯ ಮಾಡಿಸಿ ಆಕೆಯನ್ನ ನೋಡಿಕೊಳ್ಳುವಂತೆ ಹೇಳಿದ್ದ..
ನಂತರ ಸಭಾ ಮತ್ತು ಅತೀವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು.. ಕೆಲ ದಿನಗಳ ನಂತರ ಆರ್ ಆರ್ ನಗರದಲ್ಲಿ ರೂಮ್ ಬುಕ್ ಮಾಡಲು ಸಭಾ ಕರೆದಿದ್ದ. ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾಗೆ ಕರೆದಿದ್ಳು. ರೂಮ್ ಬುಕ್ ಮಾಡಿ ಕೆಲ ಹೊತ್ತಲ್ಲೇ ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಎಂಟ್ರಿ ಕೊಟ್ಟು ಆರೋಪಿಗಳು ಸೀನ್ ಕ್ರಿಯೇಟ್ ಮಾಡಿದ್ದರು.
ಖಲೀಮ್, ರಕೀಬ್, ಅತೀಕ್ ರಿಂದ ಸೀನ್ ಕ್ರಿಯೇಟ್ ಮಾಡಿದ್ದಾರೆ. ಇಜ ವಿಚಾರ ನಿಮ್ಮ ಮನೆಯವ್ರಿಗೆ ಹೇಳ್ತೀವಿ ಅಂತಾ ಆರು ಲಕ್ಷ ಡಿಮ್ಯಾಂಡ್ ಮಾಡಿದ್ದ. ಆದ್ರೆ ಈ ವೇಳೆ ಮಾಹಿತಿ ಪಡೆದು ಸಿಸಿಬಿ ಟೀಂ ದಾಳಿ ನಡೆಸಿತ್ತು. ಹನಿಟ್ರ್ಯಾಪ್ ವೇಳೆ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಹಲವರಿಗೆ ಈ ಟೀಂನಿಂದ ವಂಚನೆ ಶಂಕೆ ವ್ಯಕ್ತವಾಗಿದೆ.
ಸದ್ಯ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆಿದಿದೆ. ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.