ಧಾರವಾಡ:- ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ನಿಯಮ ಉಲ್ಲಂಘನೆ ಮಾಡಲಾಗಿದೆ.
ಬಿ.ಆರ್.ಟಿ.ಎಸ್ ಕಾರಿಡಾರ್ನಲ್ಲಿ ಅನಧಿಕೃತ ಪ್ರವೇಶ ಮಾಡಿ, ಕಾರಿಡಾರ್ನಲ್ಲಿಯೇ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಲಕ್ಷ್ಮೀ ಹೆಬ್ಬಾಳಕರ್ ಬಂದಿದ್ದು, ಈ ವೇಳೆ ನಿಯಮಗಳ ಉಲ್ಲಂಘನೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ಇರುವ ಬಿ.ಆರ್.ಟಿ.ಎಸ್ ಕಾರಿಡಾರ್ ನಲ್ಲಿ, ಚಿಗರಿ ಬಸ್ ಮತ್ತು ಅಂಬ್ಯುಲೆನ್ಸ್ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕಾರಿಡಾರ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನಧಿಕೃತ ಪ್ರವೇಶ ಮಾಡಿದ್ದಾರೆ.
ಧಾರವಾಡದ ಮಯೂರ ಹೊಟೇಲ್ಗೆ ಸಭೆ ನಡೆಸಲು ಆಗಮಿಸಬೇಕಿದ್ದ ಹೆಬ್ಬಾಳಕರ, ಈ ವೇಳ ಟೋಲ್ ನಾಕಾದಲ್ಲಿ ಬೃಹತ್ ಹಾರ ಹಾಕಿ ಸ್ವಾಗತ ಮಾಡಿದ್ದಾರೆ. ಬಳಿಕ ಬಿ.ಆರ್.ಟಿ.ಎಸ್ ಕಾರಿಡಾರ್ನಲ್ಲೇ ನಡೆದ ಬೈಕ್ ರ್ಯಾಲಿ ನಡೆದಿದೆ. ರ್ಯಾಲಿ ಮೂಲಕ ಮಯೂರ ಹೊಟೇಲ್ವರೆಗೆ ಕಾರ್ಯಕರ್ತರು ಕರೆ ತಂದಿದ್ದಾರೆ.