ಬೆಂಗಳೂರು: ಇನ್ನು ಸಿಎಂ ಉತ್ತರದ ಚರ್ಚೆಯ ವೇಳೆ ಉತ್ತರಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕಲಾಪದಲ್ಲಿ ಸಾಕಷ್ಟು ಘೋಷಣೆಗಳನ್ನ ಉತ್ತರಕ್ಕೆ ನೀಡಿದ್ರು.
- ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸುವ ಮೂಲಕ ಆರ್ಥಿಕತೆಗೆ, ಸ್ಥಳೀಯರಿಗೆ ಉದ್ಯೋಗಕ್ಕೆ ಉತ್ತೇಜನ..
- ಬೆಳಗಾವಿ ಸಮೀಪ 2 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆಯಲ್ಲಿ ಫೌಂಡರಿ ಕ್ಲಸ್ಟರ್ ಸ್ಥಾಪನೆ..
- ಧಾರವಾಡದಲ್ಲಿ ಎಸ್ಎಂಸಿಜಿ ಕೈಗಾರಿಕಾ ಕ್ಲಸ್ಟರ್, ಇದಕ್ಕೆ 19 ಘಟಕಗಳು 1255 ಕೋಟಿ ಬಂಡವಾಳ ಹೂಡ್ತಿವೆ, ಇದರಿಂದ 2450 ಉದ್ಯೋಗ ಸೃಷ್ಟಿ ನಿರೀಕ್ಷೆ..
- ಧಾರವಾಡ ಸಮೀಪ 3 ಸಾವಿರ ಎಕರೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ..
- ರಾಯಚೂರಿನಲ್ಲಿ ಹತ್ತಿ ಆಧಾರಿತ ಕೈಗಾರಿಕೆಗಳಿಗೆ ವಿಶೇಷ ಒತ್ತು..
- ವಿಜಯಪುರದಲ್ಲಿ ಉತ್ಪಾದನಾ ಕ್ಕಸ್ಟರ್ ಅನ್ನು 1500 ಎಕರೆ ಪ್ರದೇಶದಲ್ಲಿ ಸ್ಥಾಪನೆ..
- ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಮಗ್ರ ಕ್ರಿಯಾಯೋಜನೆ
- ಧಾರವಾಡದ ವಾಲ್ಮಿ ನೀರಾವರಿ ಸಂಸ್ಥೆ ಮೇಲ್ದರ್ಜೆಗೆ ಏರಿಕೆ, ಇದರಿಂದ ಜಲಶಿಕ್ಷಣ ನೀಡಲು ಒತ್ತು
- ಬಳ್ಳಾರಿ, ರಾಯಚೂರು ಏರ್ಪೋರ್ಟ್ ಗಳ ಅಭಿವೃದ್ಧಿ
ಹೀಗೆ ೧೦ ಹಲವು ಘೋಷಣೆಗಳನ್ನ ಮಾಡುವ ಮೂಲಕ ನಾವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದಾ ಇರ್ತಿವಿ ಎಂದು ಹೇಳಿದ್ರು.