ಬೆಳಗಾವಿ: ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಪರವಾಗಿ ಬ್ಯಾಟಿಂಗ್ ಮಾಡಿದರು. ಮೈಸೂರು ಏರ್ ಪೋರ್ಟ್ಗೆ ಟಿಪ್ಪು ಹೆಸರು ಇಡಬೇಕು ಎಂದು ಸದನಲ್ಲಿ ಪ್ರಸ್ತಾಪಿಸಿದ್ದೇನೆ. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಸ್ಲಿಂ ರಾಷ್ಟ್ರೀಯ ನಾಯಕರನ್ನ ವಿರೋಧಿಸಿಕೊಂಡು ಬಂದಿದ್ದಾರೆ ಎಂದರು. ಟಿಪ್ಪು ಒಬ್ಬ ರಾಷ್ಟ್ರೀಯ ಪ್ರೇಮಿ. ಮೊದಲ ಸ್ವಾತಂತ್ರ್ಯ ಹೋರಾಟಗಾರರು.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಮೈಸೂರು ಆಂಗ್ಲೋ ಮೂರು ಯುದ್ದ ಮಾಡಿದವರು.ತಮ್ಮ ಮಗನನ್ನೇ ಒತ್ತೆ ಇಟ್ಟ ಇತಿಹಾಸವಿದೆ.ಆದ್ರೆ ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡ್ತಿದ್ದಾರೆ ಎಂದರು. ಯಾರು ಬ್ರಿಟಿಷ್ರಿಗೆ ಸೆರೆಂಡರ್ ಆಗಿದ್ರೋ ಯಾರು ಬ್ರಿಟಿಷ್ರಿಂದ ಪಿಂಚಣಿ ಪಡೆಯುತ್ತಿದ್ರೋ ಅವರನ್ನ ಬಿಜೆಪಿ ರಾಷ್ಟ್ರ ಪ್ರೇಮಿ ಎಂದು ಬಿಜೆಪಿ ಬಿಂಬಿಸಲು ಹೊರಟಿದೆ. ಪರೋಕ್ಷವಾಗಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಅಬ್ಬಯ್ಯ ಕಿಡಿಕಾರಿದರು.