ಪಾದರಕ್ಷೆ, ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಯಲ್ಲಿ ಶನಿಯ ಅಶುಭ ಪ್ರಭಾವವಿದೆ. ವಾಸ್ತವವಾಗಿ, ಶನಿಗೂ ಪಾದಗಳಿಗೂ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇಡಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ಅಸ್ತವ್ಯಸ್ತವಾಗಿ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ಇಡುವುದರಿಂದ ನಕಾರಾತ್ಮಕ ಶಕ್ತಿಯು ಸಕ್ರಿಯಗೊಳ್ಳುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ವ್ಯವಸ್ಥಿತವಾಗಿ ಯಾವುದಾದರೂ ಮೂಲೆಯಲ್ಲಿ ಇಡಬೇಕು.
ಪಾದರಕ್ಷೆಗಳನ್ನು ಯಾವ ದಿಕ್ಕಿನಲ್ಲಿಡಬೇಕು?:
ಪದೇ ಪದೇ ಬಳಸುವ ಶೂ ಮತ್ತು ಚಪ್ಪಲಿಗಳನ್ನು ಪಶ್ಚಿಮ ದಿಕ್ಕಿನಲ್ಲಿ ವ್ಯವಸ್ಥಿತವಾಗಿ ಇಡಬೇಕು. ಮನೆಯಲ್ಲಿ ಹಳೆಯ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಹುಟ್ಟಿಕೊಳ್ಳುತ್ತದೆ. ಇದರ ಹೊರತಾಗಿ ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ಮನೆಯಿಂದ ಹೊರಹೋಗುವುದೇ ಇಲ್ಲ. ಸದಾ ಕಾಲ ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಶೂ ರ್ಯಾಕ್ ಈ ದಿಕ್ಕಿನಲ್ಲಿಡಬೇಡಿ:
ಶೂ ರ್ಯಾಕ್ ಅನ್ನು ಎಂದಿಗೂ ಪೂಜೆ ಕೋಣೆಯ ಗೋಡೆ ಅಥವಾ ಅಡುಗೆಮನೆಯ ಪಕ್ಕದಲ್ಲಿ ಇಡಬಾರದು. ಇದರೊಂದಿಗೆ, ಶೂ ರ್ಯಾಕ್ ಅಥವಾ ಕಪಾಟುಗಳನ್ನು ಮನೆಯ ಪೂರ್ವ ದಿಕ್ಕು, ಉತ್ತರ ದಿಕ್ಕು ಅಥವಾ ಅಗ್ನಿಕೋನ ಮತ್ತು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಇದಕ್ಕಾಗಿ ವಾಯುವ್ಯ ಅಥವಾ ನೈಋತ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
ಹಾಸಿಗೆಯ ಕೆಳಗಿಡುವುದು ಒಳ್ಳೆಯದಲ್ಲ:
ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ಅಲ್ಲಲ್ಲಿ ಬಿದ್ದಿದ್ದರೆ, ಮನೆಯ ಸದಸ್ಯರ ನಡುವಿನ ಸಂಬಂಧವು ಹದಗೆಡಲು ಪ್ರಾರಂಭಿಸುತ್ತದೆ, ಅಷ್ಟೇ ಅಲ್ಲ, ಹಾಸಿಗೆಯ ಕೆಳಗೆ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹಾಳಾದ ಚಪ್ಪಲಿ, ಶೂಗಳನ್ನು ಹಾಸಿಗೆಯ ಕೆಳಗೆ ಇಡುವ ಅಭ್ಯಾಸವನ್ನು ಬಿಟ್ಟುಬಿಡಿ.