ಬೆಂಗಳೂರು: ಬಿಎಂಟಿಸಿ ಡ್ರೈವರ್ಗಳೆಂದ್ರೆ ಅವರು ಯಮದೂತರೆನ್ನೋ ಕಳಂಕವಿದೆ. ಅವರ ಯಾವಾಗಲೂ ಸುದ್ದಿಯಾಗದೇ ಆಕ್ಸಿಡೆಂಟ್ ಗಳಿಂದ. ಹೀಗಾಗಿ ಬಿಎಂಟಿಸಿಗೆ ಕಿಲ್ಲರ್ ಬಸ್ ಅನ್ನೋ ಹಣೆಪಟ್ಟಿ ಅಂಟಿದೆ. ಆದ್ರೆ ಇದೀಗ ಈ ಅಪವಾದಿಂದ ಮುಕ್ತವಾಗುವದಕ್ಕೆ ಹೆಜ್ಜೆ ಇರಿಸಿದೆ. ನಗರದಲ್ಲಿ ಹೆಚ್ಚಾಗ್ತಿರೋ ಆಕ್ಸಿಡೆಂಟ್ ರೇಟ್ ಇಳಿಸಲು ಇದೀಗ ಬಿಎಂಟಿಸಿಗೆ ಗುದ್ದು ನೀಡಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶ ಮಾಡಿದೆ. ಅದು ಹೇಗೆ ಅಂತೀರಾ. ಈ ಸ್ಟೋರಿ..
ಬಿಎಂಟಿಸಿ ಬೆಂಗಳೂರು ನಗರದ ಜೀವನಾಡಿ. ಮೆಟ್ರೋ ಶುರುವಾದ್ರೂ ನಗರದಲ್ಲಿ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಇಳಿಯಾಗಿಲ್ಲ. ನಗರದ ರಸ್ತೆ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳು ಓಡಾಟ ನಡೆಸುತ್ತವೆ. ಬೆಂಗಳೂರಿನ ಟ್ರಾಫಿಕ್ ದಟ್ಟನೆಯಲ್ಲಿ ಓಡಾಟದ ವೇಳೆ ಈ ಬಿಎಂಟಿಸಿ ಬಸ್ ಗಳು ನೆಗಟಿವ್ ಕಾರಣಕ್ಕೆ ತುಂಬಾನೆ ಸುದ್ದಿ ಮಾಡ್ತಾವೆ. ಯಾವಾಗಲೂ ಬಿಎಂಟಿಸಿ ಡ್ರೈವರ್ ಗಳು ಸರಿಯಿಲ್ಲ, ಸರಿಯಾಗಿ ಡ್ರೈವ್ ಮಾಡಲ್ಲ, ರ್ಯಾಶ್ ಡ್ರೈವಿಂಗ್ ಮಾಡ್ತಾರೆ ಅನ್ನೋ ಸಾಲು ಸಾಲು ಆರೋಪ ಜನ ಮಾಡ್ತಾರೆ. ಮುಖ್ಯವಾಗಿ ನಗರದಲ್ಲಿ ಬಿಎಂಟಿಸಿ ಬಸ್ ಗಳು ಆಕ್ಸಿಡೆಂಟ್ ಆಗೋದೇ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷ್ಯದಿಂದ ಅಂತ ಎಲ್ಲಾ ದೂರುತ್ತಾರೆ.ಅದರಂತೆ ನಗರದಲ್ಲಿ ಯಾರ್ರಾಬಿರ್ರಿ ಆಕ್ಸಿಡೆಂಡ್ ರೇಟ್ ಹೆಚ್ಚಳವಾಗ್ತಿದೆ.ಇದ್ರಿಂದ ತಲೆಕೆಡಿಸಿಕೊಂಡಿರೋ ಬಿಎಂಟಿಸಿ ಆಡಳಿತ ಮಂಡಳಿ ಪೊಲೀಸ್ ಇಲಾಖೆ ಮೊರೆ ಹೋಗಿದೆ.
ಹೌದು.. ಹೆಸರಿಗೆ ಕಳಂಕ ತಂದುಕೊಂಡಿದ್ದ ಬಿಎಂಟಿಸಿ ಈ ಅಪವಾದದಿಂದ ಮುಕ್ತವಾಗುವಕ್ಕೆ ಹೆಜ್ಜೆ ಇರಿಸಿದೆ.ಹೌದು ಪ್ರತಿ ತಿಂಗಳೂ ನಗರದಲ್ಲಿ ಬಿಎಂಟಿಸಿ ಅಪಘಾತಗಳು ಆಗ್ತಾನೆ ಇವೆ. ಇದು ನಿಯಂತ್ರಣಕ್ಕೆ ಬರ್ತಿಲ್ಲ. 2013-14 ರಲ್ಲಿ 88 ಮಂದಿ ಮೃತಪಟ್ಟಿದ್ದರು.2014-15ರಲ್ಲಿ 78, 2015-16ರಲ್ಲಿ 69, 2016-17ರಲ್ಲಿ 45, 2017 – 18 ರಲ್ಲಿ 44,2022-23 ರಲ್ಲಿ 35 ಮಂದಿ ಬಿಎಂಟಿಸಿ ಬಸ್ ನಿಂದ ಸಾವನ್ನಪ್ಪದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರೋ ಬಿಎಂಟಿಸಿ ಅಧಿಕಾರಿಗಳು ಎಲ್ಲಾ ಡ್ರೈವರ್ ಗಳಿಗೆ ನುರಿತ ತರಬೇತಿ ಕೊಡಿಸಲು ಮುಂದಾಗಿದ್ದಾರೆ, ನಗರದ ರಸ್ತೆಗಳಲ್ಲಿ ಹೇಗೆಲ್ಲಾ ಬಸ್ ಓಡಿಸಬೇಕು ಸಿಗ್ನಲ್ ಬಂದಾಗ ಹೇಗೆ ಬಸ್ ಓಡಿಸಬೇಕು ಅನ್ನೋ ಸಂಚಾರಿ ನಿಯಮಗಳ ಬಗ್ಗೆ ಸಂಚಾರಿ ಪೊಲೀಸರು ಡ್ರೈವರ್ ಗಳಿಗೆ ಪಾಠ ಮಾಡಲಿದ್ದಾರೆ. ನಗರದ ಕಮಾಂಡ್ ಸೆಂಟರ್ ನಲ್ಲಿ ನಿತ್ಯ 50 ಚಾಲಕರಿಗೆ ಪೊಲೀಸರು ತರಬೇತಿ ನೀಡಲಿದ್ದಾರೆ.
ನಗರದಲ್ಲಿ ಅಪಘಾತಗಳು ಚಾಲಕನ ಅಚಾತುರ್ಯ,ನೈಪುಣ್ಯದ ಕೊರತೆಯಿಂದ ಸಂಭವಿಸಲಿದೆ. . ಈ ಹಿನ್ನೆಲೆಯಲ್ಲಿ ತರಬೇತಿ ಸಂಸ್ಥೆಯಲ್ಲಿ ಚಾಲಕರಿಗೆ ಸುರಕ್ಷಿತ ಚಾಲನೆಗೆ ಸಂಬಂಧಿಸಿದಂತೆ ತರಬೇತಿ ಸಹ ಕೊಡಿಸಲಾಗುತ್ತಿದೆ. ಇದಲ್ಲದೇ ಅಪಘಾತವೆಸಗಿದ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಚಿನ್ನ, ಬೆಳ್ಳಿ ಪದಕದ ಜತೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಆದ್ರೆ ನಗರದಲ್ಲಿ ಅಪಘಾತ ಗಳು ನಡೆಯುತ್ತಿವೆ..
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಾರಣಾಂತಿಕ ಅಪಘಾತಗಳ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಅಪಘಾತ ಪ್ರಕರಣಗಳಲ್ಲಿ ಭಾಗಿಯಾದ ಚಾಲಕರಿಗೆ ಸುರಕ್ಷಿತ ಚಾಲನೆ ಬಗ್ಗೆ ಸಲಹೆ, ಸೂಚನೆ ನೀಡುತ್ತಿದೆ.. ಒಟ್ಟಿನಲ್ಲಿ ನಗರದಲ್ಲಿ ನಿತ್ಯ ಬಿಎಂಟಿಸಿ ಒಂದಲ್ಲ ಒಂದು ಸಾವು ಪಡೆಯುತ್ತನೇ ಇತ್ತು. ಇದರಿಂದ ಕಿಲ್ಲರ್ ಬಿಎಂಟಿಸಿ ಅಣೆಪಟ್ಟಿ ಪಡೆದುಕೊಂಡಿತ್ತು. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಸಿದ್ದು, ಆದರೆ ಇದೀಗ ಬಿಎಂಟಿಸಿ ಅಪಘಾತ ಗಳ ಸಂಖ್ಯೆ ಇಳಕೆ ಮಾಡೋಕೆ ಹೊಸ ಪ್ಲಾನ್ ರೂಪಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.