ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಿವಿಧ ಆರೋಪಗಳನ್ನು ಮಾಡುತ್ತಿರುವ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ” ವಿ ಸೋಮಣ್ಣ ಹಾಗೂ ಯತ್ನಾಳ್ ಬ್ಲಾಕ್ ಮೇಲ್ ರಾಜಕಾರಣ ಬಿಡಬೇಕು. ಬ್ಲಾಕ್ ಮೇಲ್ ರಾಜಕಾರಣ ಯಾವತ್ತೂ ಮಾತಾಡಬಾರದು. ಇವರಿಗೆ ಪಾಪದ ಕೊಡ ತುಂಬಿದ್ದು,
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ಅಂತ್ಯವಾಗುವುದಕ್ಕೋಸ್ಕರ ಹೀಗೆಲ್ಲ ಮಾತಾಡುತ್ತಿದ್ಧಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರರನ್ನ ಜನರ ಮುಂದೆ ವಿಲನ್ ಮಾಡೋಕೆ ಇಬ್ಬರು ಹೊರಟಿದ್ದಾರೆ. ಇವರೇನು ಮಾಡಿದ್ದಾರೆ ಅಂತ ನಾವು ಇನ್ನು ಹೇಳುತ್ತೇವೆ. ನಾವೇನು ಯಾರಿಗೂ ಹೆದರಲ್ಲ, ಸೊಪ್ಪು ಹಾಕಲ್ಲ. ಇಬ್ಬರು ಅವರ ಬಗ್ಗೆ ಮಾತಾಡುವುದನ್ನು ಬಿಡಬೇಕು, ಒಟ್ಟಾಗಿ ಹೋಗಬೇಕು. ಏನಾದರೂ ಸಮಸ್ಯೆ ಇದ್ದರೆ ನಾಲ್ಕು ಗೋಡೆಗಳ ಮಧ್ಯೆ ಮಾತಾಡಿ ಬಗೆಹರಿಸಕೊಳ್ಳಬೇಕು ” ಎಂದರು.