ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಹೆಸರಾಂತ ನಟಿ, ಕನಸಿನ ರಾಣಿ ಮಾಲಾಶ್ರೀ ಕುರಿತಾಗಿ ಬಿಸಿಬಿಸಿ ಚರ್ಚೆಯಾಗಿದೆ. ವಿಧಾನ ಪರಿಷತ್ (Vidhana Parishad) ನಲ್ಲಿ ಈ ಚರ್ಚೆ ನಡೆದಿದ್ದು, ಉಮಾಶ್ರೀ (Umashree) ಸೇರಿದಂತೆ ಹಲವರು ಇದರಲ್ಲಿ ಭಾಗಿಯಾಗಿದ್ದರು. ಅಷ್ಟಕ್ಕೂ ಮಾಲಾಶ್ರೀಯನ್ನು ನೆನಪಿಸಿಕೊಂಡಿದ್ದು ಬಿಜೆಪಿಯ ಸದಸ್ಯ ವಿಶ್ವನಾಥ್ (Vishwanath) ಎನ್ನುವುದು ವಿಶೇಷ.
ವಿಧೇಯಕದ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರಿನ ಬದಲಾಗಿ, ಬಾಯ್ತಪ್ಪಿ ಮಾಲಾಶ್ರೀ (Malashree) ಅವರ ಹೆಸರು ಹೇಳಿದರು ವಿಶ್ವನಾಥ್. ಮಾಲಾಶ್ರೀ ಹೆಸರು ಕೇಳಿ ಸಭಾಪತಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿ ಆಯಿತು. ಹಾಗಾಗಿ ಮಾಲಾಶ್ರೀ ಅವರನ್ನು ಈಗೇಕೆ ನೆನಪಿಸಿಕೊಂಡಿರಿ ಎಂದು ತಮಾಷೆಯಾಗಿಯೇ ವಿಶ್ವನಾಥ್ ಅವರನ್ನು ಕೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ತೇಜಸ್ವಿನಿ ಗೌಡ, ಭಾರತದಲ್ಲಿ ಹೇಮಾಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ರು ಎಂದರು. ಮಾತು ಮುಂದುವರೆಸಿದ ತೇಜಸ್ವಿನಿಗೌಡ ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ ಮಾನದಂಡ ಆಗಿದ್ದರೆ, ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು ಎಂದರು.
ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಎಚ್ ಕೆ ಪಾಟೀಲ್, ನಟಿ ಉಮಾಶ್ರೀಯವರ ಒಡಲಾಳ ನಾಟಕ ನೋಡಿದ್ರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ನಮ್ಮ ಭಾಗದಲ್ಲಿ ಉಮಾಶ್ರೀ ಈ ಪಾತ್ರದ ಮೂಲಕ ನಾಯಕರಾಗಿಯೇ ಇದ್ದರು. ನಮ್ಮ ನಾಯಕಿ ಸೋನಿಯಾಗಾಂಧಿಯವರಿಗೆ ಒಡಲಾಳ ನಾಟಕವನ್ನ ತೋರಿಸಿದ್ವಿ. ಆ ನಂತರ ಉಮಾಶ್ರಿಯವರನ್ನ ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದ್ರು ಎಂದರು.