ಅನಿಮಲ್’ (Animal) ಚಿತ್ರದ ಸಕ್ಸಸ್ ಅಲೆಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ತೇಲುತ್ತಿದ್ದಾರೆ. ಮತ್ತೆ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಾಫಿ ಕಲರ್ ಬಣ್ಣದ ಡ್ರೆಸ್ನಲ್ಲಿ ರಶ್ಮಿಕಾ ಮಂದಣ್ಣ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್ಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾವಿರಾರು ಕಾಮೆಂಟ್ಸ್ ಬಂದಿದೆ. ಪುಷ್ಪ ಬೆಡಗಿಯ ಲುಕ್ ನೋಡಿ ಕಣ್ಣಲ್ಲೇ ಗುಂಡಿಟ್ಟು ಕೊಲ್ಲೋ ಹುಡುಗಿ ಎಂದು ಪಡ್ಡೆಹುಡುಗರು ಹಾಡಲು ಶುರು ಮಾಡಿದ್ದಾರೆ. ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ
ರಣ್ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್- ರಶ್ಮಿಕಾ ಜೋಡಿ ಮೋಡಿ ಮಾಡಿದೆ. ಲಿಪ್ಲಾಕ್ ಸೇರಿದಂತೆ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಅನಿಮಲ್ ಸಿನಿಮಾದ ಸಕ್ಸಸ್ನಿಂದ ರಶ್ಮಿಕಾ ಬಾಲಿವುಡ್ನಲ್ಲಿ ಮತ್ತಷ್ಟು ಮನ್ನಣೆ ಸಿಕ್ಕಿದೆ