ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಮಾರ್ಜಿನಲ್ ಕಾಸ್ಟ್-ಆಧಾರಿತ ಸಾಲದ ದರವನ್ನು (MCLR) ಹೆಚ್ಚಳ ಮಾಡಿದೆ. ಇದರಿಂದಾಗಿ ಬ್ಯಾಂಕ್ನ ಸಾಲದ ಇಎಂಐ (EMI) ಏರಿಕೆಯಾಗಲಿದೆ.
ಆಯ್ದು ಅವಧಿಗೆ ಅನುಗುಣವಾಗಿ 5-10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ಗ್ರಾಹಕರ ಸಾಲ ಏರಿಕೆಯಾಗಲಿದೆ.
ಎಸ್ಬಿಐ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. ಆರ್ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು ಏರಿಸದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿತ್ತು.
ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ತಮ್ಮ ಮುಂದಿನ ಕಂತುಗಳನ್ನು ಹೆಚ್ಚಿನ ದರದಲ್ಲಿ ಪಾವತಿಸಬೇಕಾಗುತ್ತದೆ.
ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?