ಬೆಂಗಳೂರು: ನಗರದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಏರುತ್ತಲೇ ಸಾಗಿದ್ದು, ಜನ ಹಾಗೂ ವೈದ್ಯರಲ್ಲಿ ಆತಂಕ ಹೆಚ್ಚಿಸಿದೆ.
ಕೇವಲ ಒಂದೇ ತಿಂಗಳಲ್ಲೇ 1468ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೂ ಕೇವಲ ರಾಜ್ಯ ರಾಜಧಾನಿಯಲ್ಲಿ ಒಟ್ಟು 7800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 15200ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರ ಬ್ಲಡ್ ಸ್ಯಾಂಪಲ್ ಅನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, 80,000ಕ್ಕೂ ಹೆಚ್ಚು ಡೆಂಗ್ಯೂ ಸೋಂಕಿತರು ಪತ್ತೆಯಾಗಿದ್ದಾರೆ.
TA Sharavana: ಭಾರೀ ಸಂಚಲನ ಮೂಡಿಸಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಕೇಸ್: ಸರ್ಕಾರದ ಗಮನ ಸೆಳೆದ ಟಿ.ಎ.ಶರವಣ!
ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ 180 ಕೇಸ್, ದಾಸರಹಳ್ಳಿ ವಲಯದಲ್ಲಿ 3 ಕೇಸ್, ಮಹದೇವಪುರ ವಲಯದಲ್ಲಿ 182 ಕೇಸ್ ಹಾಗೂ ಯಲಹಂಕ ವಲಯದಲ್ಲಿ 144 ಕೇಸ್ ಪತ್ತೆಯಾಗಿದೆ. ಸಾರ್ವಜನಿಕರು ಹೆಚ್ಚು ಜಾಗೃತರಾಗಿರಬೇಕೆಂದು ವೈದ್ಯರು ಸೂಚಿಸಿದ್ದಾರೆ.
ವಲಯವಾರು ಡೆಂಘಿ ಪ್ರಕರಣ
ಬೊಮ್ಮನಹಳ್ಳಿ 182
ದಾಸರಹಳ್ಳಿ 3
ಪೂರ್ವ 343
ಮಹದೇವಪುರ 180
ಆರ್ ಆರ್ ನಗರ 149
ದಕ್ಷಿಣವಲಯ 299
ಪಶ್ಚಿಮವಲಯ 168
ಯಲಹಂಕವಲಯ 144
ನಗರದಲ್ಲಿ ಒಟ್ಟು 1,468 ಕೇಸ್ ದಾಖಲು