ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಮಲಗಿದ್ದವರ ಮೇಲೆ ಮನೆಯ ಮೇಲ್ಚಾವಣಿ ಏಕಾಏಕಿ ಕುಸಿದು ಬಿದ್ದು, 7 ಮಂದಿಗೆ ಗಾಯಗೊಂಡಿದ್ದು , ಓರ್ವ ಬಾಲಕಿ ಸ್ಥಿತಿ ಚಿಂತಾಜನಕವಾದ ಘಟನೆ ಬೆಳಕಿಗೆ ಬಂದಿದೆ. ಶ್ರೀನಿವಾಸ್, ಹೇಮಶ್ರಿ, ಶಿವ, ಮಕ್ಕಳಾದ, ಮೇಘನಾ (6), ವೈಶಾಲಿ (7) ಶ್ರೀನಿವಾಸ್ ಸಂಬಂಧಿಕರಾದ ನಾಗಮ್ಮ, ಮುನಿವೆಂಕಟಮ್ಮ ಗಾಯಾಳುಗಳಾಗಿದ್ದಾರೆ.
Mohammad Shami: ವೇಗಿ ಮೊಹಮ್ಮದ್ ಶಮಿ ಫಾರ್ಮ್ ಹೌಸ್ಗೆ ಬಿಗಿ ಭದ್ರತೆ!
ಓರ್ವ ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದೆ. ಕೂಡಲೇ ಅಸ್ವಸ್ಥಗೊಂಡವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶ್ರೀನಿವಾಸ್ ಮತ್ತು ಕುಟುಂಬ ಕಲ್ಲು ಚಪ್ಪಡಿ ಮನೆಯೊಂದರಲ್ಲಿ ಗಾಢ ನಿದ್ರೆಗೆ ಜಾರಿದ್ರು, ಮಲಗಿದ್ದ ವೇಳೆ ತಡರಾತ್ರಿ ಮೇಲ್ಚಾವಣಿ ಕುಸಿದುಗೊಂಡ ಈ ಅವಘಡ ನಡೆದಿದೆ. ಘಟನೆ ತಿಳಿದು ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.