ಬೆಂಗಳೂರು: ಖಾಸಗಿ ಕಂಪನಿಯೊಂದರ ಟೆಕ್ಕಿ ತನ್ನ ಮೇಲೆ ಗ್ಯಾಂಗ್ ರೇಪ್ (Gang Rape) ನಡೆದಿದೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಡಿ.12 ರಂದು ರಾತ್ರಿ ಯುವತಿ ಕೋರಮಂಗಲ ಪಬ್ (Pub) ಒಂದಕ್ಕೆ ಹೋಗಿದ್ದಳು. ಬಳಿಕ ಪ್ರಜ್ಞೆ ಬಂದಾಗ ಆಕೆ ಆಡುಗೋಡಿಯ (Adugodi) ದೇವೇಗೌಡ ಲೇಔಟ್ ಬಳಿ ಇದ್ದುದು ತಿಳಿದುಬಂದಿದೆ. ತಕ್ಷಣ ಆಕೆ ಹತ್ತಿರ ಇದ್ದ ಮನೆಯೊಂದರ ಬಾಗಿಲು ಬಡಿದಿದ್ದಾಳೆ. ನಂತರ ಸ್ಥಳೀಯರು 112ಕ್ಕೆ ಕರೆ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಆಡುಗೋಡಿ ಪೊಲೀಸರು ಯುವತಿಯ ರಕ್ಷಣೆ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಕೋರಮಂಗಲ ಠಾಣೆಗೆ ಕರೆತಂದಿದ್ದಾರೆ. ಅಲ್ಲಿ ಯುವತಿ ತಾನು ಪ್ರಜ್ಞಾಹೀನಳಾಗಿದ್ದಾಗ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ದೂರು ನೀಡಿದ್ದಾಳೆ.
ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.