ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಇನ್ನೂ ಆರಿಲ್ಲ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ವಿರುದ್ಧ ಒಂದು ಗುಂಪು ತೊಡೆತಟ್ಟಿದ್ರೆ, ಮತ್ತೊಂದು ಗುಂಪು ಸೈಲೆಂಟಾಗಿ ಕಾಂಗ್ರೆಸ್ ಗೆ ಜಂಪ್ ಆಗಲು ಹೊರಟಿದೆ..
ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಳ್ಳದ ರೆಬೆಲ್ ಶಾಸಕರು, ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಯೆಸ್.. ರಾಜ್ಯ ಬಿಜೆಪಿ ನಾಯಕತ್ವ ಹಾಗೂ ಕಡೆಗಣನೆಯಿಂದ ಬೇಸತ್ತಿರೋ ಬಾಂಬೆ ಬಾಯ್ಸ್ ಕಾಂಗ್ರೆಸ್ ಗೆ ಸೇರಲು ಸಜ್ಜಾಗ್ತಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಬಂದು ಬಿಜೆಪಿ ಮೀಟಿಂಗ್ ಗಳಿಗೆ ಚಕ್ಕರ್ ಹಾಕ್ತಿದ್ದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಔತಣಕೂಟಗಳಲ್ಲಿ ಪ್ರತ್ಯಕ್ಷರಾಗ್ತಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದಿದ್ದ ಮೂವರು ಬಾಂಬೆ ಬಾಯ್ಸ್ ,ನಿನ್ನೆ ಸಿಎಲ್ಪಿ ಸಭೆ ಬಳಿಕ ಡಿಕೆಶಿ ಆಯೋಜಿಸಿದ್ದ ಔತನಕೂಟದಲ್ಲಿ ಭಾಗಿಯಾಗಿದ್ದಾರೆ.
ಎಸ್ ಟಿ ಸೋಮಶೇಖರ್, ಶಿವರಾಂಹೆಬ್ಬಾರ್ ,ಎಚ್ ವಿಶ್ವನಾಥ್ ಕಾಂಗ್ರೆಸ್ ಸಚಿವರು, ಶಾಸಕರ ಜೊತೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.ಈ ಮೂಲಕ ಬಿಜೆಪಿ ನಾಯಕರಿಗೆ ಇರುಸು ಮುರುಸು ತಂದಿದ್ದಾರೆ. ನಿನ್ನೆ ರಾತ್ರಿಯ ಪಾರ್ಟಿ ರಹಸ್ಯವನ್ನ ಖುದ್ದು ಡಿ.ಕೆ ಶಿವಕುಮಾರ್ ಅವ್ರೇ ಬಿಚ್ಚಿಟ್ಟಿದ್ದಾರೆ.ಬೇರ ಪಕ್ಷದ ೧೦ ಶಾಸಕರು ಊಟಕ್ಕೆ ಬಂದಿದ್ದರು ಎಂದು ಡಿಕೆಶಿ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಇನ್ನು ಡಿಕೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರ ಬಗ್ಗೆ ಎಸ್ ಟಿ ಸೋಮಶೇಖರ್, ಎಚ್ ವಿಶ್ವನಾಥ್ ಸರ್ಮಥನೆ ಮಾಡಿಕೊಂಡಿದ್ದಾರೆ.ಡಿಕೆ ಶಿವಕುಮಾರ್ ಊಟಕ್ಕೆ ಕರೆದಿದ್ರು.ಊಟಕ್ಕೆ ಹೋದ್ರೆ ಏನ್ ತಪ್ಪು ಎಂದು ಎಸ್ ಟಿ ಸೋಮಶೇಖರ್, ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.
ರೆಬೆಲ್ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಪಕ್ಷ ನಾಯಕ ಆರ್ ಅಶೋಕ್ ಕಸರತ್ತು ನಡೆಸ್ತಿದ್ದಾರೆ. ಊಟಕ್ಕೆ ಕರೆದಿದ್ದಾರೆ.. ಹೋಗಿದ್ದಾರೆ. ಅದನ್ನ ನನಗೂ ಹೇಳಿದ್ರು. ಬಿಜೆಪಿ ಸಭೆಗೆ ಬಂದಿದ್ರು. ನಮ್ಮ ಪ್ರತಿಭಟನೆಯಲ್ಲೂ ಭಾಗಿಯಾಗಿದ್ರು ಅಂತಾ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ರು..
ಒಟ್ಟಾರೆ,ಬಿಜೆಪಿಯಿಂದ ಮಾನಸಿಕವಾಗಿ ದೂರುವಾಗಿರುವ ಬಾಂಬೆ ಶಾಸಕರು,ಕೈ ಪಕ್ಷಕ್ಕೆ ಮರಳಲು ವೇದಿಕೆ ಸಜ್ಜಾಗುತ್ತಿದೆ.ಲೋಕಸಭೆ ಚುನಾವಣೆ ವೇಳೆ ಅಧಿಕೃತವಾಗಿ ಮರಳಿ ಕಾಂಗ್ರೆಸ್ ಗೂಡ ಸೇರಲು ತೀರ್ಮಾನ ನಡೆಸಿದ್ದಾರೆ ಎನ್ನಲಾಗಿದೆ.