ಬೆಂಗಳೂರು: ಲೋಕಸಭೆಯ (Lok Sabha) ಮೇಲೆ ದಾಳಿ ನಡೆಸಿದ್ದ ಮೈಸೂರು (Mysuru) ಮೂಲದ ಮನೋರಂಜನ್ (Manoranjan) ಮೂರು ಬಾರಿ ಸಂಸದ ಪ್ರತಾಪ್ ಸಿಂಹ (Pratap Simha) ಕಚೇರಿಯಿಂದ ಪಾಸ್ (Pass) ಪಡೆದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾನೆ.
ಹಾಗೆ ಆರೋಪಿ ಮನೋರಂಜನ್ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆರೋಪಿ ಮನೋರಂಜನ್ಗೆ ಬೆಂಗಳೂರಿನ ಜೊತೆ ಅವಿನಾಭಾವ ಸಂಬಂಧವಿದೆ. ಈತನ ಬಹುತೇಕ ಸ್ನೇಹಿತರು ಬೆಂಗಳೂರಿನವರಾಗಿದ್ದು (Bengaluru) ತನಿಖೆ ನಡೆಯುತ್ತಿದೆ.
ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ. ಬಳಿಕ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ವಿವಿಪುರಂ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರೋಪಿ ಮನೋರಂಜನ್ ವಿಧ್ಯಾಭ್ಯಾಸ ಮಾಡಿದ್ದಾನೆ. ಈ ಬಗ್ಗೆ ಮಾತನಾಡಿರುವ ಕಾಲೇಜು ಪ್ರಿನ್ಸಿಪಾಲ್ ಅಶ್ವಥ್ ಅವರು, ಮನೋರಂಜನ್ 2018ರ ಬ್ಯಾಚ್ ಔಟ್. ಈತ ಡ್ರಾಪ್ ಔಟ್ ಸ್ಟೂಡೆಂಟ್. ನಮ್ಮಲ್ಲಿ ಬಿಇ ಪದವಿ ಪೂರ್ಣ ಮಾಡಿಲ್ಲ. ಡ್ರಾಪ್ ಔಟ್ ಮಾಡಿ ಹೋಗಿದ್ದಾರೆ. ವಿಧ್ಯಾರ್ಥಿಯ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಮಾಹಿತಿ ಪಡೆಯುತ್ತಿದ್ದೇವೆ ಎಂದರು.