ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳುತ್ತಿದೆಯಾ “ಶಕ್ತಿ” ಯೋಜನೆ ಎಂದು ಅನಿಸುತ್ತಿದೆ ಹಾಗಾಗಿ ಶಕ್ತಿ ಯೋಜನೆ ವಿರುದ್ಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಪ್ರತಿನಿತ್ಯವೂ ಶಾಲಾ ಅವಧಿಗೆ ಸರಿಯಾಗಿ ಹೋಗೋಕಾಗದೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಬಸ್ ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾದರೂ ಬಾರದ ಸಾರಿಗೆ ಬಸ್ ಗಳು ವಿರುದ್ಧ ಸಿಡಿದೆದ್ದಿದ್ದಾರೆ ಒಂದುವೇಳೆ ಬಸ್ ಬಂದರೂ ಹೆಜ್ಜೆ ಇಡೋಕು ಜಾಗವಿಲ್ಲದಷ್ಟು ರಷ್ ಆಗಿರುತ್ತೆ ಎಂದು ಅಳಲು
ನಮ್ಮಂತ ವಿದ್ಯಾರ್ಥಿಗಳ ಪರದಾಟಕ್ಕೆ ನೇರವಾಗಿ ಸರ್ಕಾರವೇ ಕಾರಣ ಎಂದು ಆಕ್ರೋಶ ಶಕ್ತಿ ಯೋಜನೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ ಹೆಣ್ಣು ಮಕ್ಕಳಿಗೂ ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ತುಮಕೂರಿನ ವಿದ್ಯಾರ್ಥಿನಿಯೊಬ್ಬಳ ಆಕ್ರೋಶದ ವಿಡಿಯೋ ವೈರಲ್
ಬಸ್ ಸಿಗದ ಕಾರಣ ಶಕ್ತಿ ಯೋಜನೆ ವಿರುದ್ಧ ಕಿಡಿ ಕಾರುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಮಹಿಳೆಯರಿಗೂ ಶಕ್ತಿ ಯೋಜನೆ ಜಾರಿ ಮಾಡಬಾರದಿತ್ತು ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಮಾತ್ರ ಜಾರಿ ಮಾಡಬೇಕಿತ್ತು ಎಂದು ಆಗ್ರಹಬಸ್ ಸಿಗದೇ ಪರದಾಟ ನಡೆಸುತ್ತಿರುವ ವೇಳೆ ವಿದ್ಯಾರ್ಥಿಗಳ ವಿಡಿಯೋ ವೈರಲ್
ಕೈ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ *ಶಕ್ತಿ” ಮಹಿಳಾಸಬಲಿಕರಣದ ಉದ್ದೇಶಕ್ಕಾಗಿ ಜಾರಿ ಮಾಡಿರುವ ಶಕ್ತಿ ಸ್ಕೀಂ ಜೂನ್ 11 ರಂದು ಸ್ವತಃ ಸಿದ್ದರಾಮಯ್ಯನವರೇ ಉಚಿತ ಪ್ರಯಾಣಕ್ಕೆ ಚಾಲನೆ ಅಂದಿನಿಂದ ಇಲ್ಲಿವರೆಗೂ 113.08 ಕೋಟಿ ಮಹಿಳಾ ಪ್ರಯಾಣಿಕರ ಸಂಚಾರ