ವಿಧಾನಸಭೆ: ಕಲಾಪದಲ್ಲಿ 2023-24 ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳ ಪ್ರಸ್ತಾವಗಳಿಗೆ ಅಂಗೀಕಾರ ಮಾಡಿದ್ದು ಚರ್ಚೆ, ಜಟಾಪಟಿ ನಂತರ ಹೆಚ್ಚುವರಿ ವೆಚ್ಚಗಳಿಗೆ ಸದನದಲ್ಲಿ ಅಂಗೀಕಾರ ದೊರೆತಿದೆ.
ಒಟ್ಟು 3542.10 ಕೋಟಿ ರೂ ಮೊತ್ತದ ಪೂರಕ ಅಂದಾಜುಗಳ ಪ್ರಸ್ತಾವಗಳಿಗೆ ಅಂಗೀಕಾರ ಹಲವು ಇಲಾಖೆಗಳಲ್ಲಿ ಹೆಚ್ಚುವರಿ ವೆಚ್ಚಗಳಿಗೆ ಸದನ ಅಂಗೀಕಾರ
ಪೂರಕ ಅಂದಾಜು ವೆಚ್ಚಗಳೇನು..?
– ಶಾಸಕರಿಗೆ ಹೊಸ ಕಾರುಗಳ ಖರೀದಿಗೆ ಹೆಚ್ಚುವರಿಯಾಗಿ 4 ಕೋಟಿ ರೂ
– ಡಿಸಿಎಂ ಮತ್ತು ಮಂತ್ರಿಗಳ ಕಚೇರಿಗಳ ವೆಚ್ಚಕ್ಕೆ ಹೆಚ್ಚುವರಿಯಾಗಿ 2.71 ಕೋಟಿ ರೂ
– ವಿಷ್ಣು ಸ್ಮಾರಕಕ್ಕೆ ಹೆಚ್ಚುವರಿಯಾಗಿ 75.47 ಲಕ್ಷ ರೂ
– ದಸರಾ ಆಚರಣೆಗೆ ಹೆಚ್ಚುವರಿಯಾಗಿ 8.5 ಕೋಟಿ ರೂ
– ದಸರಾ ಸಿಎಂ ಕಪ್ ಗೆ 4.85 ಕೋಟಿ ರೂ
– 2022-23 ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ 7.30 ಕೋಟಿ ರೂ
– ಮುಂದಿನ ಜನವರಿಯಲ್ಲಿ ದಾವೋಸ್ ನಲ್ಲಿ ನಡೆಯಲಿರುವ ವರ್ಲ್ಡ್ ಎಕಾನಾಮಿಕ್ ಫೋರಂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಸಿಎಂ ನೇತೃತ್ವದ ನಿಯೋಗಕ್ಕೆ 12 ಕೋಟಿ ರೂ
– ಬೃಹತ್ ಕೈಗಾರಿಕಾ ಸಚಿವರ ನೇತೃತ್ವದ ನಿಯೋಗ ಮುಂದಿನ ವರ್ಷ ಅಮೆರಿಕ ಭೇಟಿಗೆ 14.25 ಕೋಟಿ ರೂ
– 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಬಾಕಿ ಬಿಲ್ ಗಳ ಪಾವತಿಗೆ 4.66 ಕೋಟಿ ರೂ
– ಕರ್ನಾಟಕ ಸಂಭ್ರಮ 50 ರ ಆಚರಣೆಗೆ ಹೆಚ್ಚುವರಿಯಾಗಿ 5 ಕೋಟಿ ರೂ
– ಸ್ಪೀಕರ್ ಗೆ ಹೊಸ ಕಾರು ಖರೀದಿಗೆ ಹೆಚ್ಚುವರಿಯಾಗಿ 36 ಲಕ್ಷ ರೂ, ಡೆಪ್ಯುಟಿ ಸ್ಪೀಕರ್ ಗೆ ಹೊಸ ಕಾರು ಖರೀದಿಗೆ ಹೆಚ್ಚುವರಿಯಾಗಿ 8 ಲಕ್ಷ ರೂ
– ಗೃಹಲಕ್ಷ್ಮಿ ನಿಧಿ ಕೊಡ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅತೀ ಹೆಚ್ಚು 610.70 ಕೋಟಿ ರೂ