ಮಂಡ್ಯ:– ಹೆಣ್ಣು ಕೊಟ್ಟ ಅತ್ತೆಯನ್ನೇ ಕಿರಾತಕ ಅಳಿಯ ಕೊಂದಿದ್ದು, ಕೊಲೆಯ ಕಾರಣ ಕೇಳಿ ಪತ್ನಿಯೇ ಶಾಕ್ ಆಗಿದ್ದಾಳೆ. ಕಾಂತರಾಜು ಕೊಲೆ ಮಾಡಿರುವ ಆರೋಪಿ.
ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದಲ್ಲಿ ನಡೆದಿದ್ದ ಹತ್ಯೆ. ಮಗಳು ಅರ್ಪಿತಾ ಮುಂದೆಯೇ ಮಧ್ಯ ರಾತ್ರಿ 12.30 ರಲ್ಲಿ ಕೊಲೆಯಾಗಿದ್ದ ತಾಯಿ ಪಾರ್ವತಮ್ಮ(50). ರಾತ್ರಿ ಮುಸುಕುದಾರಿಯೊಬ್ಬ ಫಾಲೋ ಮಾಡಿಕೊಂಡು ಬಂದು
ಚಾಕುವಿನಿಂದ ಕತ್ತು ಕೂಯ್ದು ಕೊಲೆಗೈದು ಎಸ್ಕೇಪ್ ಆಗಿದ್ದ ಹಂತಕ.
ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಮಗಳ ಗಂಡನೇ ಅತ್ತೆಯನ್ನು ಕೊಂದಿರುವ ಆಘಾತಕಾರಿ ವಿಚಾರ ಬಯಲು ಮಾಡಿದ್ದಾರೆ. ಅರ್ಪಿತಾ ತವರು ಮನೆ ಸೇರಲು ಮೃತ ಪಾರ್ವತಮ್ಮಳೆ ಕಾರಣ ಎಂಬ ಸೇಡು ತುಂಬಿಕೊಂಡಿದ್ದ ಆರೋಪಿ ಕಾಂತರಾಜ್ ಹೀಗಾಗಿ ಅತ್ತೆಯನ್ನು ಮುಗಿಸಲು ಸಂಚು ಮಾಡಿದ್ದ. ಮೊನ್ನೆ ಹಬ್ಬದ ಹಿನ್ನಲೆ ಮನೆ ದೇವರ ಪೂಜೆಗೆ ತೆರಳಿದ್ದ ಪಾರ್ವತಮ್ಮ ಹಾಗೂ ಮಗಳು. ಪೂಜೆ ಮುಗಿಸಿ ವಾಪಸ್ಸು ಆಗುವಾಗ ಹಿಂದೆ ಫಾಲೋ ಮಾಡಿದ್ದ ಅಳಿಯ. ಯಾರಿಗೂ ಗುರುತು ತಿಳಿಯದಂತೆ ಮುಸುಕುದಾರಿಯಾಗಿ, ಜರ್ಕಿನ್ ಧರಿಸಿ ಬಂದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಕಾಂತರಾಜು.
ಸ್ವಂತ ಹೆಂಡತಿಗೆ ತಿಳಿಯದಂತೆ ವೇಷ ಧರಿಸಿ ಬಂದಿದ್ದ ಹಂತಕ ಕಾಂತರಾಜು. ಅತ್ತೆಯನ್ನ ಕೊಂದ ಬಳಿಕ ಏನೂ ಗೊತ್ತಿಲ್ಲದ್ದಂತೆ ತಮ್ಮೂರಿನ ಮನೆಯಲ್ಲಿ ಇದ್ದ ಕೀಚಕ. ಅನುಮಾನದ ಮೇಲೆ ವಿಚಾರಣೆ ನಡೆಸಿದ ವೇಳೆ ಸತ್ಯ ಹೊರಬಿದ್ದಿದೆ.