ಬೆಳಗಾವಿ:- ಮುಲ್ಲಾ ಗಳಿಗೆ 10 ಸಾವಿರ ಕೋಟಿ ಘೋಷಿಸಿದ ಸಿಎಂ ಗೆ ರೈತರ ನೆನಪಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ ಮಾಡಿದ್ದಾರೆ .
ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಅಂದಿದ್ದಾರೆ. ಮಾಡಿದ್ದಾರೆ ಅದು ಮುಲ್ಲಾಗಳಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಅದೇ ರೈತರಿಗೆ ನಯಾಪೈಸೆ ಅನುದಾನವನ್ನ ಕೊಟ್ಟಿಲ್ಲ. ನೀವು ಯಾರಾದರೂ ಮಕ್ಕಳನ್ನ ದತ್ತು ತಗೊಂಡ್ರೆ ಸರ್ಕಾರಕ್ಕೆ ಟ್ಯಾಕ್ಸ್ ಕೊಡಬೇಕು. ತೆರಿಗೆ ಸಂಗ್ರಹಿಸುವ ಬಿಲ್ ಗಳನ್ನು ಸದನದಲ್ಲಿ ಪಾಸ್ ಮಾಡುತ್ತಿದ್ದಾರೆ. 14 ಬಜೆಟ್ ಮಂಡಿಸಿರೋ ಸಿದ್ದರಾಮಯ್ಯ, ಮಕ್ಕಳು ಹಾಲು ಕುಡಿಬೇಕು ಅಂದ್ರೆ 3ರೂಪಾಯಿ ಹೆಚ್ಚಳ ಮಾಡಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ವಿವಿಧ ರೀತಿಯಲ್ಲಿ 60 ಟ್ಯಾಕ್ಸ್ಗಳನ್ನ ಹಾಕುತ್ತಿದೆ. ಸರ್ಕಾರದ ಫ್ರೀ ಯೋಜನೆ ದೊಡ್ಡ ಮೋಸ. ಇಂತಹ ಸಿಎಂಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಲೆವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಬಜೆಟ್ ಖಾಲಿ ಖಾಲಿ ಬಜೆಟ್. ಬೆಳಗಾವಿಗೆ ಬಂದು ಜನರ ಮೇಲೆ ಟ್ಯಾಕ್ಸ್ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಸರ್ಕಾರ ಎಂದು ವ್ಯಂಗ್ಯ ವಾಡಿದ ಅಶೋಕ, ಈ ರೀತಿಯ ಕೆಟ್ಟ ಸರ್ಕಾರ ತೊಲಗಬೇಕು ಎಂದರು.