ದಿನದ ಮೂರು ಹೊತ್ತು ಸರಿಯಾದ ಪ್ರಮಾಣದಲ್ಲಿ, ಸರಿಯಾದ ಆಹಾರವನ್ನು ತಿನ್ನುವುದು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಆದ್ರೆ ಇತ್ತೀಚಿಗೆ ಹೆಚ್ಚಿನವರು ಕಾಲೇಜ್, ಆಫೀಸಿಗೆ ಲೇಟಾಯ್ತು ಅನ್ನೋ ಕಾರಣಕ್ಕೆ ಬೆಳಗ್ಗಿನ ಉಪಾಹಾರವನ್ನು ಸ್ಕಿಪ್ ಮಾಡ್ತಾರೆ. ಆದ್ರೆ ಇಂಥಾ ಅಭ್ಯಾಸದಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಾಗುತ್ತೆ, ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ ಇಲ್ಲಿ.
ಬೆಳಗ್ಗಿನ ಉಪಾಹಾರವು ಬಹಳ ಮುಖ್ಯವಾದ ಊಟವಾಗಿದೆ. ಇದು ನಿಮ್ಮ ಈಡೀ ದಿನಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೊಮ್ಮ ಸಮಯದ ಅಭಾವದಿಂದ ಬೆಳಗ್ಗಿನ ಉಪಾಹಾರವನ್ನು ತಪ್ಪಿಸುತ್ತಾರೆ. ಇನ್ನು ಕೆಲವರು ತೂಕ ಇಳಿಸಬೇಕು ಅನ್ನೋ ಕಾರಣಕ್ಕೆ ಬೆಳಗ್ಗೆ ತಿನ್ನುವುದಿಲ್ಲ.
ಬೆಳಗ್ಗಿನ ಆರೋಗ್ಯಕರ ಉಪಾಹಾರ ಸೇವಬೆ ನಿಮ್ಮನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಬಹುದು. ಅದೇ ಬೆಳಗ್ಗಿನ ಉಪಾಹಾರವನ್ನು ಬಿಟ್ಟು ಬಿಡುವ ಅಭ್ಯಾಸ ನಿಮ್ಮಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಬ್ರೇಕ್ಫಾಸ್ಟ್ ಸ್ಕಿಪ್ ಮಾಡೋದ್ರಿಂದ ಏನೆಲ್ಲಾ ತೊಂದ್ರೆಯಾಗುತ್ತೆ ತಿಳ್ಕೊಳ್ಳಿ.
ಶಕ್ತಿಯ ಕೊರತೆ
ಹೌದು, ಬೆಳಗ್ಗಿನ ಉಪಹಾರವನ್ನು ಸ್ಕಿಪ್ ಮಾಡುವುದರಿಂದ, ದೇಹದಲ್ಲಿ ಶಕ್ತಿಯ ಕೊರತೆ ಆಗುತ್ತದೆ. ಏಕೆಂದರೆ ರಾತ್ರಿ ಊಟ ಮಾಡಿ ಬಹಳ ಸಮಯವಾದ್ದರಿಂದ ನಮಗೆ ಉಪಹಾರದ ಅಗತ್ಯ ಖಂಡಿತ ಇದ್ದೆ ಇರುತ್ತದೆ. ಒಂದು ವೇಳೆ ನಾವು ಬ್ರೇಕ್ಫಾಸ್ಟ್ ಅನ್ನು ಸ್ಕಿಪ್ ಮಾಡಿದ್ರೆ ನಮ್ಮಲ್ಲಿ ಶಕ್ತಿ ಕೊರತೆ ಆಗಿ, ನಮ್ಮ ಕೆಲಸದಲ್ಲಿ ಉತ್ಪಾದಕತೆ ಮತ್ತು ಏಕಾಗ್ರತೆ ಕಡಿಮೆ ಆಗುತ್ತದೆ.
ಮೂಡ್ ಸ್ವಿಂಗ್ಸ್
ಬೆಳಗ್ಗಿನ ಉಪಹಾರ ಸ್ಕಿಪ್ ಮಾಡುವುದರಿಂದ, ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ, ಆಯಾಸ ಹೆಚ್ಚಾಗಿ ಅದರಿಂದ ಮೂಡ್ ಸ್ವಿಂಗ್ಸ್ ಆಗುತ್ತದೆ. ಇದಲ್ಲದೇ ಏಕಾಗ್ರತೆ ಮಟ್ಟವು ತುಂಬಾ ಕಡಿಮೆಯಾಗುತ್ತದೆ.
ತೂಕ ಹೆಚ್ಚಳ
ಬೆಳಗ್ಗಿನ ಉಪಾಹಾರ ಆರೋಗ್ಯಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ತಪ್ಪಿಸಿದಾಗ ತೂಕ ಹೆಚ್ಚಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ದೇಹವು ಈಗಾಗಲೇ ರಾತ್ರಿಯಿಡೀ ಹಸಿವಿನಿಂದ ಬಳಲುತ್ತಿದೆ ಮತ್ತು ನೀವು ಬೆಳಿಗ್ಗೆ ಆಹಾರವನ್ನು ತ್ಯಜಿಸುವುದನ್ನು ಮುಂದುವರಿಸಿದಾಗ, ದೇಹವು ಸಕ್ಕರೆ ಮತ್ತು ಕೊಬ್ಬಿನ ಆಹಾರಕ್ಕಾಗಿ ಹಂಬಲಿಸಲು ಪ್ರಾರಂಭಿಸುತ್ತದೆ. ಅಲ್ಲದೆ, ಹಸಿವು ಉಂಟಾದಾಗ, ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಗಮನಿಸದೆ ನೀವು ಕಂಡುಕೊಂಡದ್ದನ್ನು ನೀವು ತಿನ್ನುವ ಸಾಧ್ಯತೆ ಹೆಚ್ಚು.
ಚಯಾಪಚಯವನ್ನು ನಿಧಾನಗೊಳಿಸುತ್ತದೆ
ಬೆಳಗ್ಗಿನ ಆಹಾರವನ್ನು ಬಿಟ್ಟುಬಿಟ್ಟಾಗ, ಚಯಾಪಚಯ ನಿಧಾನವಾಗುತ್ತದೆ. ಇದಲ್ಲದೆ, ರಾತ್ರಿಯಿಡೀ ತಿನ್ನದ ನಂತರ ಬೆಳಿಗ್ಗೆ ದೀರ್ಘಾವಧಿಯ ಉಪವಾಸವು ಕ್ಯಾಲೊರಿಗಳನ್ನು ಸುಡುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಬೆಳಗಿನ ಉಪಾಹಾರವನ್ನು ನಿಯಮಿತವಾಗಿ ಸೇವಿಸುವ ಜನರು ಹೆಚ್ಚಿನ ಮಟ್ಟದ ಚಯಾಪಚಯವನ್ನು ಹೊಂದಿರುತ್ತಾರೆ.
ಪೋಷಕಾಂಶಗಳ ಕೊರತೆ
ನಿಯಮಿತವಾಗಿ ಬ್ರೆಕ್ಫಾಸ್ಟ್ ಅನ್ನು ಸ್ಕಿಪ್ ಮಾಡುವುದರಿಂದ, ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಇದರಿಂದ ದೇಹಕ್ಕೆ ಅತಿ ಅಗತ್ಯವಿರುವ ಪೋಷಕಾಂಶಗಳ ಕೊರತೆಯಾಗಿ, ಮುಂದೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳು ಆಗಬಹುದು.ಪೋಷಕಾಂಶಗಳ ಕೊರತೆ
ನಿಯಮಿತವಾಗಿ ಬ್ರೆಕ್ಫಾಸ್ಟ್ ಅನ್ನು ಸ್ಕಿಪ್ ಮಾಡುವುದರಿಂದ, ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಇದರಿಂದ ದೇಹಕ್ಕೆ ಅತಿ ಅಗತ್ಯವಿರುವ ಪೋಷಕಾಂಶಗಳ ಕೊರತೆಯಾಗಿ, ಮುಂದೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳು ಆಗಬಹುದು.
ಹಾರ್ಮೋನ್ಗಳ ಅಸಮತೋಲನ
ನಿಯಮಿತವಾಗಿ ಬ್ರೇಕ್ಫಾಸ್ಟ್ ಅನ್ನು ಸ್ಕಿಪ್ ಮಾಡಿದಾಗ, ಅದರಿಂದ ದೇಹದಲ್ಲಿ ಶಕ್ತಿ ಕೊರತೆಯಾಗಿ, ನಂತರ ಅದು ಹಾರ್ಮೋನ್ಗಳ ಅಸಮತೋಲನಕ್ಕೆ ನೇರ ಕಾರಣವಾಗುತ್ತದೆ. ಉದಾಹರಣೆಗೆ ಹಸಿವು ಹೆಚ್ಚಾಗುವ ರೀತಿ ಅನಿಸುವುದು, ಅಥವಾ ಸಮಾಧಾನ ಇಲ್ಲದೇ ಹೋಗೋದು ಇತ್ಯಾದಿ.
ಹೃದಯ ಸಂಬಂಧಿತ ಕಾಯಿಲೆಗಳು ಬರುತ್ತವೆ
ಹೌದು, ಬ್ರೇಕ್ಫಾಸ್ಟ್ ಅನ್ನು ಸ್ಕಿಪ್ ಮಾಡುವವರು ಮೊದಲಿಗೆ ತಿಳಿದುಕೊಳ್ಳಬೇಕಾದ ವಿಷಯವೆಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯಕ್ಕೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.