ಜಗತ್ತನ್ನು ಅಂಗೈಯಲ್ಲಿ ತೋರಿಸುವ ಮೊಬೈಲ್ ಈಗ ಊಟ-ನಿದ್ದೆಯಷ್ಟೇ ಮುಖ್ಯ ಎಂಬಂತಾಗಿದೆ. ಅದಕ್ಕಿಂತಲೂ ಒಂದು ಪಟ್ಟು ಹೆಚ್ಚೇ ಮಹತ್ವ ಪಡೆದಿದೆ ಎಂದರೂ ತಪ್ಪಿಲ್ಲ. ಬಿಡುವಿನ ಸಮಯದಲ್ಲಿ ಮೊಬೈಲ್ ನೋಡುವ ಕಾಲ ಇದಲ್ಲ. ಬಿಡುವು ಇಲ್ಲದಿದ್ದರೂ ಮಧ್ಯೆಮಧ್ಯೆ ಮೊಬೈಲ್ ಮೇಲೆ ಕಣ್ಣು-ಕೈ ಆಡಿಸಬೇಕು. ಮೊಬೈಲ್ ನೋಡಲೆಂದೇ ಸಮಯ ಎತ್ತಿಡುವವರು, ಮೊಬೈಲ್ ನೋಡುತ್ತ ಸಮಯ ಹಾಳು ಮಾಡುವವರು, ಮೊಬೈಲ್ನಲ್ಲೇ ದಿನ ಕಳೆಯುವವರು-ಹೀಗೆ ವಿವಿಧ ವರ್ಗಗಳ ಜನರು ಇದ್ದಾರೆ.
ನಾವು ಹಲವು ಕಂಪನಿಗಳ ಹಾಗೂ ವಿವಿಧ ವಿನ್ಯಾಸದ ಮೊಬೈಲ್ ಫೋನ್ ಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಮೊಬೈಲ್ ಬೇಗ ತಮ್ಮ ಕೆಲಸ ನಿಲ್ಲಿಸುತ್ತವೆ. ಆಗ ನಾವು ಮೊಬೈಲ್ ಕಂಪನಿಯವರನ್ನು ಹೊಣೆಗಾರರನ್ನಾಗಿಸುತ್ತೇವೆ. ಇದು ಸಾಮಾನ್ಯ. ಅದಕ್ಕೂ ಮುಂಚೆ ನಾವು ಮೊಬೈಲ್ ಫೋನ್ ಗಳನ್ನು ಯಾವ ರೀತಿ ಬಳಸಬೇಕು? ಅದು ಹೆಚ್ಚು ದಿನ ಹೇಗೆ ಕೆಲಸ ಮಾಡುವಂತೆ ಗಮನಹರಿಸಬೇಕು? ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಚಾರ್ಜ್ ಮಾಡುವಾಗ ಇರಲಿ ಎಚ್ಚರ
ನಾವು ಹಲವು ಬಾರಿ ಮೋಬೈಲ್ ಚಾರ್ಜ್ ಮಾಡುವುದರಿಂದ ನಮ್ಮ ಫೋನ್ ಹಾಳಾಗುತ್ತದೆ. ಹೀಗಾಗಿ, ಚಾರ್ಜ್ ಹಾಕುವಾಗ ಹೆಚ್ಚು ಗಮನಹರಿಸಬೇಕು. ಮೊಬೈಲ್ ಬ್ಯಾಟರಿ ಶೇ.20 ಕ್ಕಿಂತ ಕಡಿಮೆ ಇದ್ದಾಗ ಮಾತ್ರ ಚಾರ್ಜ್ ಮಾಡಬೇಕು. ಮುಖ್ಯವಾಗಿ ಫೋನ್ನೊಂದಿಗೆ ಬಂದ ಚಾರ್ಜರ್ ಮಾತ್ರ ಬಳಸಬೇಕು.
ಹೆಚ್ಚು ಸ್ಟೋರೇಜ್ ಅಗತ್ಯವಿಲ್ಲ
ಮೊಬೈಲ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಟೋರೇಜ್ ಇಟ್ಟುಕೊಳ್ಳಭಾರದು. ಮೊಬೈಲ್ ವೇಗವಾಗಿ ಕೆಲಸ ಮಾಡಲು ಕ್ರೌಡ್ ಸ್ಟೋರೇಜ್ ಮತ್ತು ಹಾರ್ಡ್ ಡಿಸ್ಕ್ ಬಳಸಬೇಕು. ಹೆಚ್ಚು ಸ್ಟೋರೇಜ್ ಇದ್ದರೆ ಮೊಬೈಲ್ ಕಾರ್ಯಕ್ಷಮತೆ ಕೂಡ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಮೊಬೈಲ್ ಹೆಚ್ಚು ದಿನ ಕೆಲಸ ಮಾಡಲು ಸಾಧ್ಯವಾಗದೆ ಇರಬಹುದು.
ಈ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿ
ಮೊಬೈಲ್ ನಲ್ಲಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವಾಗ ಎಚ್ಚರಿಕೆ ವಹಿಸುವುದು ಅನಿವಾರ್ಯ. ವೆರಿಫೈಡ್ ಪ್ಲೇಸ್ಟೋರ್ನಿಂದ ಮಾತ್ರ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. APK ಫೈಲ್, ಬ್ಲೂಟೂತ್ ಫೈಲ್ಗಳನ್ನು ತೆಗೆದುಕೊಂಡರೆ ವೈರಸ್ ಅಪಾಯವಿರುತ್ತದೆ.
ಇನ್ನೂ, ವಾರದಲ್ಲಿ ಒಮ್ಮೆ ಮೊಬೈಲ್ ಫೋನ್ ಅನ್ನು ರಿಸ್ಟಾರ್ಡ್ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಮೊಬೈಲ್ ಹ್ಯಾಂಗ್ ಆಗುವುದು ತಪ್ಪಲಿದೆ. ಜೊತೆಗೆ, ನಿಮ್ಮ ಮೊಬೈಲ್ ಹೆಚ್ಚು ದಿನಗಳ ಕಾಲ ಕೆಲಸ ಮಾಡಲು ಸಹಕಾರಿಯಾಗಲಿದೆ.