ಟೆಲ್ ಅವಿವ್: ಇಸ್ರೇಲ್ (Israel) ಸೇನೆ ಗಾಜಾದಲ್ಲಿನ (Gaza) ಹಮಾಸ್ (Hamas) ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ (Tunnel) ಸಮುದ್ರದ ನೀರನ್ನು ಬಿಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಹಮಾಸ್ ಉಗ್ರರು ಒತ್ತೆಯಾಳು ಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಬಳಸಲಾಗುತ್ತಿದೆ ಎಂದು ನಂಬಲಾಗಿರುವ ಈ ಸುರಂಗಗಳನ್ನು ನಾಶಪಡಿಸಲು,
Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ ಗೊತ್ತಾ: ಇಲ್ಲಿದೆ ಟಿಪ್ಸ್!
ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ.