ನವದೆಹಲಿ:- ಸಮಾಜಕ್ಕೆ ಯತ್ನಾಳ್ ಕೊಡುಗೆ ಏನು? ಎಂದು ಮುರುಗೇಶ್ ನಿರಾಣಿ ಪ್ರಶ್ನೆ ಮಾಡಿದ್ದಾರೆ.
ವಿಜಯೇಂದ್ರ ಅವರಿಗೆ ಅರ್ಹತೆಯ ಮೇಲೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. ಬ್ಲ್ಯಾಕ್ಮೇಲ್ ಮಾಡಿ ಅವರಿಗೆ ಪಟ್ಟ ಕಟ್ಟಲಾಗಿದೆ ಎಂಬುದೆಲ್ಲ ಸುಳ್ಳು. ಈ ರೀತಿಯ ಆರೋಪ ಮಾಡುವವರ ಅವನತಿ ಆರಂಭವಾಗಿದೆ. ರಾಜ್ಯಾಧ್ಯಕ್ಷರ ಬಳಿ ಮಾತನಾಡಿ ಅವರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ಮೇಲೆ ಬಂದು, ನಮ್ಮ ಪಕ್ಷದ ಮುಖಂಡರ ವಿರುದ್ಧವೇ ಮಾತಾಡುವ ಆ ವ್ಯಕ್ತಿ ಸ್ವಘೋಷಿತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾನೆ. ಮಾತನಾಡಿದಾಗ ನಾಲ್ಕು ಜನರು ಚಪ್ಪಾಳೆ ಹೊಡೆದರೆ ಆತ ನಾಯಕ ಅಲ್ಲ. ಸಮಾಜಕ್ಕೆ ಆತನ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಅವರ ಕೊಡ ತುಂಬಲು ಬಂದಿದೆ, ಇನ್ನು ಬಹಳ ದಿನ ನಡೆಯಲ್ಲ. ಅಧಿಕಾರಕ್ಕಾಗಿ ಅವರು ಹೀಗೆ ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದವರು ಪರೋಕ್ಷವಾಗಿ ಕುಟುಕಿದರು.
ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಡಾ.ಮುರುಗೇಶ ಆರ್.ನಿರಾಣಿ ಹೇಳಿದ್ದಾರೆ.