ಸುವರ್ಣಸೌಧ:- ಗೃಹ ರಕ್ಷಕರ ಕರ್ತವ್ಯ ಭತ್ಯೆ ಪರಿಷ್ಕರಣೆಗೆ ಚಿಂತನೆ ನಡೆಸಲಾಗಿದೆ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗೃಹ ರಕ್ಷಕ ದಳದ ಸಿಬ್ಬಂದಿಗೆ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದರು. ರಾಜ್ಯದಲ್ಲಿ 21,327 ಪುರುಷರು ಮತ್ತು 4,555 ಮಹಿಳೆಯರು ಗೃಹ ರಕ್ಷಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ಎಲ್ಲ 25,882 ಮಂದಿಗೂ ಸಮಾನವಾಗಿ ಕರ್ತವ್ಯ ಭತ್ಯೆ ನಿಗದಿಪಡಿಸಲು ಯೋಚಿಸಲಾಗಿದೆ’ ಎಂದರು.
ಈಗ ಪೊಲೀಸ್ ಇಲಾಖೆಯಲ್ಲಿ ಸೇವೆ ಒದಗಿಸುವ ಗೃಹ ರಕ್ಷಕರಿಗೆ ದಿನವೊಂದಕ್ಕೆ ₹ 750 ಮತ್ತು ಇತರ ಇಲಾಖೆಗಳಲ್ಲಿ ₹ 600 ನೀಡಲಾಗುತ್ತಿದೆ. ಪಹರೆ ಕರ್ತವ್ಯಕ್ಕೆ ನಿಯೋಜಿಸುವವರಿಗೆ ಬೆಂಗಳೂರಿನಲ್ಲಿ ₹ 455 ಮತ್ತು ಇತರೆ ಸ್ಥಳಗಳಲ್ಲಿ ₹ 380 ನೀಡಲಾಗುತ್ತಿದೆ. ಎಲ್ಲ ಗೃಹ ರಕ್ಷಕ ಸಿಬ್ಬಂದಿಗೂ ಸಮಾನವಾಗಿ ₹ 750 ನೀಡಲಾಗುವುದು. ನಂತರ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು ಪರಿಶೀಲಿಸಿ ರಾಜ್ಯದಲ್ಲೂ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.