ಬೆಂಗಳೂರು:- ನಮ್ಮ ಯಾತ್ರಿ ಆಯಪ್ ಸರ್ವೀಸ್ ಸಂಸ್ಥೆ ಹಾಗೂ ಬೆಂಗಳೂರು ಆಟೋ ಚಾಲಕರ ಸಂಘದ ನಡುವೆ ಬಿರುಕು ಮೂಡಿದೆ. ಪರಿಣಾಮ ಆಟೋಚಾಲಕರ ಸಂಘ ನಮ್ಮ ಯಾತ್ರಿ ಆಯಪ್ ಪಾರ್ಟ್ನರ್ಶಿಪ್ನಿಂದ ಹೊರಬಂದಿದೆ.
ARDU ಬೆಂಬಲಿತ ನಮ್ಮ ಯಾತ್ರಿ ಆಯಪ್ನಲ್ಲಿ ಪ್ರಯಾಣ ದರ ವಿಚಾರಕ್ಕೆ ಸಂಬಂಧಿಸಿದಂತೆ ARDU ಹಾಗೂ ಆಟೋ ಚಾಲಕರ ಸಂಘದ ಜೊತೆ ಒಮ್ಮತ ಮೂಡಿಲ್ಲ. ಇಷ್ಟೇ ಅಲ್ಲ ಈ ಹಿಂದೆ ARDU ತೆಗೆದುಕೊಂಡ ನಿರ್ಧಾರಕ್ಕೂ ಆಟೋಚಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಟೋ ಚಾಲಕರ ಸಂಘ, ನಮ್ಮ ಯಾತ್ರಿ ಸಂಬಂಧ ಮುರಿದುಕೊಂಡಿದೆ.
ಮೆಟ್ರೋ ನಿಲ್ದಾಣದಿಂ 2 ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ 40 ರೂಪಾಯಿ ದರ ವಿಧಿಸುವಂತೆ ಆಟೋ ಚಾಲಕರು ಆಗ್ರಹಿಸಿದ್ದರು. ಆದರೆ ನಮ್ಮ ಯಾತ್ರಿ ಪೇಮೆಂಟ್ ಸೊಲ್ಯುಶನ್ ಪ್ರೊವೈಡರ್ ಈ ಪ್ರಸ್ತಾವನೆ ಒಪ್ಪಿಕೊಂಡಿಲ್ಲ. ಇದರಿಂದ ಮನಸ್ತಾಪ ಜೋರಾಗಿದೆ. ಯೂನಿಯನ್ ಹಾಗೂ ಆಟೋ ಚಾಲಕರ ಸಂಘದ ನಡುವಿನ ಮನಸ್ತಾಪದಿಂದ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
ಇತ್ತೀಚೆಗೆ ಮೊಬೈಲ್ ಆಯಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲೆಂದೇ ಅಭಿವೃದ್ಧಿಪಡಿಸಲಾಗಿದ್ದ ‘ನಮ್ಮ ಯಾತ್ರಿ’ ಆಟೋ ಆಯಪ್ ವಿರುದ್ಧವೇ ಆಟೋ ಚಾಲಕರು ಅಭಿಯಾನ ಆರಂಭಿಸಿದ್ದರು. ಬೈಕ್ ಟ್ಯಾಕ್ಸಿ ವಿರುದ್ಧ ಇತ್ತೀಚೆಗೆ ಬೆಂಗಳೂರು ನಗರ ಆಟೋ ಚಾಲಕರ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿತ್ತು. ಅಂದು ಎಲ್ಲ ಆಟೋ ಚಾಲಕರು ಆಟೋ ಸಂಚಾರ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿತ್ತು.