ಬೆಂಗಳೂರು:- ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ.
ಮನೆ ಯಜಮಾನಿಯ ಹೆಸರು ಮತ್ತು ವಿಳಾಸ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ನಿಮ್ಮ ಮೊಬೈಲ್ ನಂಬರ್ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ವರ್ಗಾವಣೆ ಆಗುತ್ತಿದ್ದು, ಮೊದಲ ಹಂತದಲ್ಲಿ 15ಜಿಲ್ಲೆಗಳ ಫಲಾನುಭವಿಗಳು ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು 5,96,268 ಫಲಾನುಭವಿಗಳ ಖಾತೆ ಆಧಾರ್ ಕಾರ್ಡ್ಗೆ ಲಿಂಕ್ ಆಗಿಲ್ಲ. ಆದರೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ನೊಂದಿಗೆ ಲಿಂಕ್ ಆಗಿದ್ದು, ಅವರಿಗೆ ಯೋಜನೆಯ ಹಣ ಜಮಾ ಆಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ.
ಈ ಜಿಲ್ಲೆಗಳಲ್ಲಿ 4ನೇ ಕಂತಿನ ಹಣ ಸಂದಾಯವಾಗಿದೆ?
1 ಚಿತ್ರದುರ್ಗ
2 ಬೆಂಗಳೂರು
3 ಕೋಲಾರ
4 ಮಂಡ್ಯ
5 ಬೆಳಗಾವಿ
6. ಬಾಗಲಕೋಟೆ
7. ಧಾರವಾಡ
8. ಹಾಸನ
9. ಬಿಜಾಪುರ
10. ಉತ್ತರ ಕನ್ನಡ
11. ದಾವಣಗೆರೆ
12. ಗದಗ
13. ರಾಯಚೂರು
14. ಕಲಬುರಗಿ
15 ಮೈಸೂರು